ಮಂಗಳೂರಿನಲ್ಲಿ ಸಂಘಪರಿವಾರದಿಂದ ಅನೈತಿಕ ಪೊಲೀಸ್ ಗಿರಿ ಪ್ರಕರಣ: ಮೂವರ ಬಂಧನ !

Prasthutha|

ಮಂಗಳೂರು: ನಂತೂರು ಸರ್ಕಲ್‌ ಬಳಿ ಬಸ್ ನಲ್ಲಿ ಯುವತಿಯೊಂದಿಗೆ ಪ್ರಯಾಣಿಸುತ್ತಿದ್ದಾನೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮ್ ಯುವಕನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಮುತ್ತು(18), ಪ್ರಕಾಶ್‌(21) ಮತ್ತು ರಾಕೇಶ್‌(23) ಬಂಧಿತರು. ಈ ಮೂವರೂ ಸಂಘಪರಿವಾರದ ಕಾರ್ಯಕರ್ತರು ಎಂದು ತಿಳಿದುಬಂದಿದೆ.

ಕಾರ್ಕಳದಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ನಲ್ಲಿ ಯುವಕ ಮತ್ತು ಯುವತಿ ಒಂದೇ ಸೀಟಿನಲ್ಲಿ ಕುಳಿತುಕೊಂಡಿದ್ದರು ಎನ್ನಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ನಂತೂರು ಬಳಿ ಬಸ್ ತಡೆದು ನಿಲ್ಲಿಸಿದ ಸಂಘಪರಿವಾರದ ಕಾರ್ಯಕರ್ತರು ಬಸ್ ನಿಂದ ಇಬ್ಬರನ್ನು ಕೆಳಗಿಳಿಸಿ ಥಳಿಸಿದ್ದರು. ಗಾಯಗೊಂಡ ಯುವಕ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದನು.

- Advertisement -