ಮಂಗಳೂರು| ‘ಪದ್ಮಶ್ರೀ’ ಸುಕ್ರಿ ಬೊಮ್ಮಗೌಡರಿಗೆ ಉಸಿರಾಟದ ತೊಂದರೆ; ಆಸ್ಪತ್ರೆಗೆ ದಾಖಲು

Prasthutha|

ಮಂಗಳೂರು: ಪದ್ಮಶ್ರೀ ಪುರಸ್ಕೃತ ಸುಪ್ರಸಿದ್ಧ ಜನಪದ ಗಾಯಕಿ ಸುಕ್ರಿ ಬೊಮ್ಮಗೌಡ ಉಸಿರಾಟದ ತೊಂದರೆಯಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

ಮೂಲಗಳ ಪ್ರಕಾರ ಸುಕ್ರಿ ಬೊಮ್ಮಗೌಡ ಅವರು ಐಸಿಯುನಲ್ಲಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆದರೆ ನಾಳೆ 11 ಗಂಟೆಗೆ ಅವರ ದೇಹಸ್ಥಿತಿಯನ್ನು ಗಮನಿಸಿ ಆ್ಯಂಜಿಯೊಗ್ರಾಫಿ ಮಾಡುವುದೋ, ಇಲ್ಲವೋ ಎಂದು ವೈದ್ಯರು ನಿರ್ಧರಿಸಲಿದ್ದಾರೆ.

3-4 ತಿಂಗಳಿನಿಂದ 86 ವರ್ಷಗಳ ಸುಕ್ರಿ ಬೊಮ್ಮಗೌಡ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೃತಕ ಉಸಿರಾಟದ ಉಪಕರಣದ ಉಪಯೋಗದಲ್ಲಿದ್ದರು. ಆದರೆ ಕಳೆದ ನಾಲ್ಕು ದಿನಗಳಿಂದ ಈ ಕೃತಕ ಉಸಿರಾಟ ಉಪಕರಣ ಇದ್ದಾಗ್ಯೂ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.



Join Whatsapp