ಮಂಗಳೂರು: ‘ಮೈಸೂರು ಮಹಿಳೆಯ ಪ್ರಕರಣದಲ್ಲಿ ಪೊಲೀಸರ ಲೋಪವಿಲ್ಲ’: ಕಮೀಷನರ್ ಎನ್.ಶಶಿಕುಮಾರ್

Prasthutha|

ಪರಿಷತ್ ಕಲಾಪದಲ್ಲಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದ ತೇಜಸ್ವಿನಿ

- Advertisement -

ಮಂಗಳೂರು: ಪರಿಷತ್ ಕಲಾಪದಲ್ಲಿ ಮಂಗಳೂರು ಪೊಲೀಸರ ಮೇಲೆ MLC ತೇಜಸ್ವಿನಿ ಗಂಭೀರ ಆರೋಪ ಮಾಡಿದ್ದು, ತೇಜಸ್ವಿನಿ ಆರೋಪಕ್ಕೆ ಮಂಗಳೂರು ಪೊಲೀಸರು ಉತ್ತರ ನೀಡಿದ್ದಾರೆ.

ಪರಿಷತ್ ಕಲಾಪದಲ್ಲಿ ತೇಜಸ್ವಿನಿಯವರು ಮೈಸೂರಿನ ಮಹಿಳೆಯೊಬ್ಬರ ದೂರನ್ನು ಮಂಗಳೂರು ಪೊಲೀಸರು ಸ್ವೀಕರಿಸದೆ ದೂರು ನೀಡೋಕೆ ಬಂದಾಕೆಯನ್ನು ಬಸ್ ಹತ್ತಿಸಿ ವಾಪಾಸ್ ಮೈಸೂರಿಗೆ ಕಳುಹಿಸಿದ್ದಾರೆ ಎಂದು ಆರೋಪ ಮಾಡಿದ್ದರು.

- Advertisement -

ಈ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ಆಯುಕ್ತ ಎನ್‌.ಶಶಿಕುಮಾರ್, ಪೊಲೀಸರಿಂದ ಯಾವುದೇ ಲೋಪ ಆಗಿಲ್ಲ ಎಂದಿದ್ದಾರೆ.

ಮೈಸೂರಿನ ಯುವತಿಯೊಬ್ಬಳು ತನಗೆ ಮೋಸ ಆಗಿದೆ ಎಂದು ಮಂಗಳೂರಿನ ಯುವಕನ ಮನೆಗೆ ಬಂದಿದ್ದು, ಈ ವೇಳೆ ಯುವಕನ ಮನೆಯಲ್ಲಿ ಯುವತಿಗೆ ಕಪಾಳಮೋಕ್ಷ ಮಾಡಿ ಮನೆಯಿಂದ ಹೊರ ಕಳುಹಿಸಿದ್ದಾರೆ. ಆಗ ಕೋಣಾಜೆ ಬಸ್ ಸ್ಟಾಂಡ್ ಗೆ ಬಂದು ಅಳುತ್ತಾ ಕುಳಿತಿದ್ದಳು. ಆಗ ಸಾರ್ವಜನಿಕರು 112 ಗೆ ಕರೆ ಮಾಡಿದ್ದು, ಈ ವೇಳೆ ಪೊಲೀಸರೇ ಬಸ್ ಸ್ಟಾಂಡ್ ಗೆ ಹೋಗಿ ಮಹಿಳೆಯ ಕಷ್ಟ ಕೇಳಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ. ನಂತರ ಪೊಲೀಸರು ಮಹಿಳೆಯ ಬಳಿ ದೂರನ್ನು ಇಲ್ಲಿ ಕೂಡ ಕೊಡಬಹುದು ಅಂತಾ ಹೇಳಿದ್ದರು‌. ಆದರೆ ಮೈಸೂರಿನಲ್ಲೆ ಮೋಸ ಆಗಿರೋದು ಅಲ್ಲೇ ದೂರು ಕೊಡುತ್ತೇನೆ ಯುವತಿ ಹೇಳಿದ್ದಾರೆ.

ಬಳಿಕ ಪೊಲೀಸ್ ಇಲಾಖೆ ವಾಹನದಲ್ಲಿ ಕರೆದುಕೊಂಡು ಹೋಗಿ ಬಸ್ ಹತ್ತಿಸಿದ್ದಾರೆ. ನಂತರ ಪೊಲೀಸರು ಬಸ್ ಚಾಲಕ ಮತ್ತು ನಿರ್ವಾಹಕರಿಗೂ ಜೋಪಾನವಾಗಿ ಕರೆದುಕೊಂಡು ಹೋಗಲು ಹೇಳಿದ್ದಾರೆ‌. ಆದ್ರೆ ಬಸ್ ನಲ್ಲಿರುವಾಗ ಅವರ ಅಡ್ವೋಕೇಟ್ ಇಲ್ಲೇ ದೂರು ನೀಡಲು ಹೇಳಿದ್ದಾರೆ‌. ಬಳಿಕ ಅವರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ‌. ನಾವು ಅವತ್ತೆ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.



Join Whatsapp