ಮಂಗಳೂರು | ನಕ್ಸಲ್ ಶರಣಾಗತಿ, ಎನ್‌ ಕೌಂಟರ್‌ ನಲ್ಲಿ ಸಂಶಯವಿದೆ: ಅಣ್ಣಾಮಲೈ

Prasthutha|

►’ಪೊಲಿಟಿಕಲ್ ಮೈಲೇಜ್ ಪಡೆಯಲು ಸರ್ಕಾರ ನಕ್ಸಲರ ಶರಣಾಗತಿಯನ್ನು ಬಳಸಿಕೊಂಡಿದೆ’

- Advertisement -

ಮಂಗಳೂರು: ಕರ್ನಾಟಕದ ಇತ್ತೀಚಿನ ನಕ್ಸಲ್ ಶರಣಾಗತಿ ಪ್ರಕ್ರಿಯೆಯಲ್ಲಿ ರಾಜಕೀಯ ಆಟ ನಡೆದಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ನಕ್ಸಲ್ ಮುಖಂಡ ವಿಕ್ರಮ್ ಗೌಡನ ಎನ್‌ ಕೌಂಟರ್ ಕೂಡ ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

- Advertisement -

“ನಕ್ಸಲ್ ಶರಣಾಗತಿಯ ಸಾಮಾನ್ಯ ಪ್ರಕ್ರಿಯೆ ಬಹಳ ಸಂಕೀರ್ಣವಾಗಿದೆ. ಇದರಲ್ಲಿ ಹಲವಾರು ನಿಯಮಗಳು ಮತ್ತು ಕಟ್ಟುನಿಟ್ಟಿನ ಕಾರ್ಯವಿಧಾನಗಳಿರುತ್ತವೆ. ಆದರೆ, ಕರ್ನಾಟಕದಲ್ಲಿ ನಡೆದ ಈ ಘಟನೆ ಸಂಶಯಕ್ಕೆ ಕಾರಣವಾಗಿದೆ. ಎನ್‌ ಕೌಂಟರ್ ನಡೆದ ತಕ್ಷಣ ನಕ್ಸಲರು ಶರಣಾದರು ಎಂದು ಸರ್ಕಾರ ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಯಾರು ಈ ನಕ್ಸಲರನ್ನು ಶರಣಾಗಲು ಪ್ರೇರೇಪಿಸಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ” ಎಂದು ಅಣ್ಣಾಮಲೈ ಹೇಳಿದರು.

“ನಕ್ಸಲ್ ಸಂಘಟನೆಯೊಳಗಿನ ಆಂತರಿಕ ರಾಜಕೀಯವನ್ನು ಕಾಂಗ್ರೆಸ್ ಸರ್ಕಾರ ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬ ಶಂಕೆ ಇದೆ. ನಾನು ಚಿಕ್ಕಮಗಳೂರು ಎಸ್ಪಿಯಾಗಿದ್ದಾಗ ನಕ್ಸಲರು ಶರಣಾಗಿದ್ದರು. ಆಗ ನಾನು ಈ ಪ್ರಕ್ರಿಯೆಯನ್ನು ನಿಕಟವಾಗಿ ಗಮನಿಸಿದ್ದೆ. ನಿಯಮಗಳ ಪ್ರಕಾರ, ಜಿಲ್ಲಾಧಿಕಾರಿ ಮತ್ತು ಎಸ್ಪಿಯ ಸಮ್ಮುಖದಲ್ಲಿ ಮಾತ್ರ ನಕ್ಸಲರು ಶರಣಾಗಬೇಕು. ಆದರೆ ಇಲ್ಲಿ ಆ ನಿಯಮ ಪಾಲಿಸಿಲ್ಲ ಎಂದು ತೋರುತ್ತಿದೆ” ಎಂದು ಅವರು ಹೇಳಿದರು.

ನಕ್ಸಲ್ ಶರಣಾಗತಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪೋಲೀಸ್ ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆಯಬೇಕಿತ್ತು. ಇಲ್ಲಿ ಸರಕಾರ ಪೊಲಿಟಿಕಲ್ ಮೈಲೇಜ್ ಪಡೆಯಲು ಈ ವಿಚಾರವನ್ನು ಬಳಸಿಕೊಂಡಿದೆ. ಶರಣಾಗತಿ ಪ್ರಕ್ರಿಯೆ ಸರಿಯಾಗಿ ನಡೆಸದ ಕಾರಣ ಮುಂದೆ ನಕ್ಸಲ್ ಚಿಂತನೆಯ ಜನ ಸಾಮಾಜಿಕ ಜೀವನಕ್ಕೆ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೂ ಹಾನಿಯಾಗಲಿದೆ ಎಂದು ಹೇಳಿದ್ದಾರೆ.



Join Whatsapp