ಮೈಸೂರು-ಮಂಗಳೂರು ವಿಮಾನ ಸೇವೆಗೆ ಚಾಲನೆ | ಮೊದಲ ಪ್ರಯಾಣದಲ್ಲಿ ಎಷ್ಟು ಪ್ರಯಾಣಿಕರಿದ್ದರು ಗೊತ್ತಾ?

Prasthutha|

ಮೈಸೂರು : ಮಂಗಳೂರು ಮತ್ತು ಮೈಸೂರು ನಡುವಿನ ವಿಮಾನ ಸೇವೆಗೆ ಚಾಲನೆ ನೀಡಲಾಗಿದೆ. ಅಲಯನ್ಸ್ ಏರ್ ಕಂಪೆನಿಯ ವಿಮಾನ ವಾರದಲ್ಲಿ ನಾಲ್ಕು ದಿನಗಳ ಕಾಲ ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

- Advertisement -

ಶುಕ್ರವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕೊಚ್ಚಿನ್-ಮೈಸೂರು-ಮಂಗಳೂರು ವಿಮಾನಕ್ಕೆ ಚಾಲನೆ ನೀಡಲಾಯಿತು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ವಿಮಾನ ನಿಲ್ದಾಣದ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಮೊದಲ ದಿನ ಮೈಸೂರಿನಿಂದ ಮಂಗಳೂರಿಗೆ 23 ಪ್ರಯಾಣಿಕರಿದ್ದರು. ಮಂಗಳೂರಿನಿಂದ ಮೈಸೂರಿಗೆ ಬರಲು 33 ಟಿಕೆಟ್ ಬುಕ್ ಆಗಿತ್ತು. ಮೈಸೂರು-ಮಂಗಳೂರು ನಡುವೆ 2,303 ರೂ.ಗೆ ಪ್ರಯಾಣ ನಡೆಸಬಹುದು. ಬುಧವಾರ, ಶುಕ್ರವಾರ, ಶನಿವಾರ, ಭಾನುವಾರ ಮಾತ್ರ ವಿಮಾನ ಸಂಚಾರ ನಡೆಸಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಾಗ, ಪ್ರತಿದಿನ ಸಂಚಾರ ಆರಂಭಗೊಳ್ಳಲಿದೆ.



Join Whatsapp