ಮಂಗಳೂರು: ಬೆಂಬಲಿಗರ ಸಭೆ ಕರೆದ ಮೊಯ್ದಿನ್ ಬಾವಾ

Prasthutha|

ಮಂಗಳೂರು: ಮಾಜಿ ಶಾಸಕ ಮೊಯ್ದಿನ್ ಬಾವಾ ಮಾ.21ರಂದು ಕಂಕನಾಡಿಯ ಅಲ್ ರಹಬಾ ಸಭಾಂಗಣದಲ್ಲಿ ಅಭಿಮಾನಿಗಳ ಸಭೆ ಕರೆದಿದ್ದಾರೆ. ಬೆಂಬಲಿಗರು ಪಕ್ಷೇತರ ಸ್ಪರ್ಧೆಗೆ ಒತ್ತಾಯಿಸುತ್ತಿದ್ದು, ಅಭಿಮಾನಿಗಳ ಸಭೆ ಕರೆದು ಅವರ ನಿರ್ಧಾರದಂತೆ ಮುಂದುವರಿಯುತ್ತೇನೆ ಎಂದು ಮೊಯ್ದಿನ್ ಬಾವಾ ಹೇಳಿದ್ದಾರೆ.

- Advertisement -

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಸಿಗದ ಬಾವಾ ಜೆಡಿಎಸ್‌‌ನಿಂದ ಸ್ಪರ್ಧೆ ಮಾಡಿ ಸೋತಿದ್ದರು.

ಮತ್ತೆ ಕಾಂಗ್ರೆಸ್ ಸೇರುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ನಾಯಕರು ಆಹ್ವಾನಿಸಿದರೆ ರೆಡಿ ಇದ್ದೇನೆ ಎಂದಿದ್ದ ಬಾವಾ, ನಾನು ಜೆಡಿಎಸ್ ನಲ್ಲೇ ಇದ್ದೇನೆ ಎಂದೂ ಹೇಳಿದ್ದರು. ಇದೀಗ ಬೆಂಬಲಿಗರ ಸಭೆ ಕರೆದು ಪಕ್ಷೇತರ ಸ್ಪರ್ಧೆಯ ಮಾತುಗಳನ್ನಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

- Advertisement -

ನನಗೆ ನನ್ನ ಅಭಿಮಾನಿಗಳು, ಬೆಂಬಲಿಗರೇ ನಿರ್ಣಾಯಕ. ಅವರು ಹೇಳಿದಂತೆ ಕೇಳುತ್ತೇನೆ ಎಂದಿರುವ ಮೊಯ್ದಿನ್ ಬಾವಾ ಅವರ ಮುಂದಿನ ರಾಜಕೀಯ‌ ನಡೆ ಏನು ಎಂದು ಕಾದು ನೋಡಬೇಕಿದೆ.

Join Whatsapp