ಕರಾವಳಿ ಸೇರಿದಂತೆ ನಾಡಿನಾದ್ಯಂತ ಸಂಭ್ರಮದ ಈದುಲ್ ಫಿತ್ರ್ ಆಚರಣೆ

Prasthutha|

- Advertisement -

ಬೆಂಗಳೂರು/ಮಂಗಳೂರು: ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಮಂಗಳವಾರ ಮುಸ್ಲಿಮರು ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
30 ದಿನಗಳ ಉಪವಾಸ ಆಚರಿಸಿದ ಮುಸ್ಲಿಮರು ಶವ್ವಾಲ್ ತಿಂಗಳ ಚಂದ್ರ ದರ್ಶನವಾಗುತ್ತಿದ್ದಂತೆ ಬಡವರಿಗೆ ಫಿತ್ರ್ ಝಕಾತ್ ವಿತರಿಸಿ, ಹೊಸ ಬಟ್ಟೆ ಧರಿಸಿ ಈದ್ಗಾ, ಮಸೀದಿಗಳಿಗೆ ತೆರಳಿ ಈದ್ ನಮಾಝ್ ನಿರ್ವಹಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.
ಮಂಗಳೂರಿನ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ ಹಾಜ್ ಅಬ್ದುಲ್ ಅಕ್ರಂ ಮುಹಮ್ಮದ್ ಬಾಖವಿ ನೇತೃತ್ವದಲ್ಲಿ ಸಾಮೂಹಿಕ ನಮಾಝ್ ನಡೆಯಿತು.
ಉಳಿದಂತೆ ಇಬ್ರಾಹೀಂ ಖಲೀಲ್ ಮಸ್ಜಿದ್, ಪಂಪ್ ವೆಲ್ ತಕ್ವಾ ಮಸೀದಿ, ಬದ್ರಿಯಾ ಮಸೀದಿ, ಕಚ್ ಮಸೀದಿ ಸೇರಿದಂತೆ ಬಹುತೇಕ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ನಡೆಯಿತು.
ಬೆಂಗಳೂರಿನ ಖುದ್ದೂಸ್ ಶಾ ಈದ್ಗಾ ಮೈದಾನ, ಬನ್ನೇರುಘಟ್ಟ ಈದ್ಗಾ, ಚಾಮರಾಜಪೇಟೆ ಈದ್ಗಾ ಮೈದಾನಗಳಲ್ಲಿ ಈದ್ ನಮಾಝ್ ನೆರವೇರಿತು.



Join Whatsapp