ಮಂಗಳೂರು : ಹೆಚ್ಚಿದ ಕೊರೋನಾ | ಮೂಡಿದ ಆತಂಕ !

Prasthutha|

ಮಂಗಳೂರು : ಜಿಲ್ಲೆಯಲ್ಲಿ ಕೋವಿಡ್ ೧೯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು , ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ , ಕಳೆದ ಒಂದೇ ದಿನ ೧೦೫ ಪ್ರಕರಣಗಳು ಪತ್ತೆಯಾಗಿದ್ದು ಇದರ ಮಧ್ಯೆ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ೨ ಹಾಸ್ಟೆಲ್ ಗಳನ್ನು ಕಂಟೈನ್ ಮೆಂಟ್ ವಲಯಗಲಾಗಿ ಘೋಷಿಸಲಾಗಿದೆ .
ಹೊರವಲಯದ ಹಾಸ್ಟೆಲ್ ವೊಂದರಲ್ಲಿ ೧೨ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು , ವಿದ್ಯಾರ್ಥಿ ಹಾಗೂ ವಿಧ್ಯಾರ್ಥಿನಿಯರ ಹಾಸ್ಟೆಲ್ ಗಳನ್ನು ಕಂಟೈನ್ ಮೆಂಟ್ ವಲಯಗಳಾಗಿ ಮಾಡಲಾಗಿದೆ .

- Advertisement -


ವಿಶ್ವವಿಧ್ಯಾಲಯದ ಕ್ಯಾಂಪಸ್ ಗಳಿಗೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದ್ದು ವಾಸ್ತವ್ಯವಿರುವ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿದ್ದಾರೆ , ಕಳೆದ ಹಲವು ದಿನಗಳಿಂದ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಕೋವಿಡ್ ೧೯ ನೋಡೆಲ್ ಅಧಿಕಾರಿ ಡಾ.ಅಶೋಕ್ ತಿಳಿಸಿದ್ದಾರೆ .
ಹಾಸ್ಟೆಲ್ ವಿಧ್ಯಾರ್ಥಿಗಳು ಹೊರಗೆ ಹೋಗದಂತೆ ಹಾಗೂ ಹೊರಗಿನ ಯಾವೊಬ್ಬರೂ ಹಾಸ್ಟೆಲ್ ಪ್ರವೇಶಿಸಿದಂತೆ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದ್ದು , ಎಲ್ಲಾ ವಿಧ್ಯಾರ್ಥಿಗಳಿಗೆ ಶನಿವಾರ ಗಂಟಲು ದ್ರವ ತಪಾಸಣೆ ನಡೆಸಲಾಗುವುದು ಎನ್ನಲಾಗಿದೆ .

ಒಟ್ಟು ೬೦೪ ಸಕ್ರಿಯ ಪ್ರಕರಣ : ಶುಕ್ರವಾರ ಒಂದೇ ದಿನ ೧೦೫ ಪೊಸಿಟಿವ್ ಪ್ರಕರಣ ದಾಖಲಾಗುವುದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೬೦೪ ಕ್ಕೆ ಏರಿಕೆ ಕಂಡಿದ್ದು , ಅದೇ ರೀತಿ ಶುಕ್ರವಾರ ೬೫ ಮಂದಿ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.

Join Whatsapp