ಮಂಗಳೂರು| ಕುಖ್ಯಾತ ಕ್ರಿಮಿನಲ್ಸ್ ಪಿಂಕಿ ನವಾಝ್, ಶರಣ್ ವಿರುದ್ಧ ಗೂಂಡಾ ಕಾಯ್ದೆ; ಹೈಕೋರ್ಟ್ ಸಮ್ಮತಿ

Prasthutha|

ಮಂಗಳೂರು:  ಕುಖ್ಯಾತ ಕ್ರಿಮಿನಲ್ಗಳಾಗಿರುವ ಪಿಂಕಿ ನವಾಜ್ ಮತ್ತು ಆಕಾಶ ಭವನ ಶರಣ್ ಮೇಲೆ ಮಂಗಳೂರು ನಗರ ಪೊಲೀಸರು ಹಾಕಿರುವ ಗೂಂಡಾ ಕಾಯ್ದೆಗೆ ಹೈಕೋರ್ಟ್ ಸಮ್ಮತಿ ಸೂಚಿಸಿದೆ.

- Advertisement -

ಹತ್ಯೆ, ಕೊಲೆ ಯತ್ನ, ದರೋಡೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪಿಂಕಿ ನವಾಜ್ ಮತ್ತು ಆಕಾಶಭವನ ಶರಣ್‌ನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದರು. ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಈ ಇಬ್ಬರ ಮೇಲೆ ಗೂಂಡಾ ಕಾಯ್ದೆ ಹಾಕುವ ಪ್ರಸ್ತಾವನೆಯನ್ನು ರಾಜ್ಯ ಗೃಹ ಇಲಾಖೆಗೆ ಸಲ್ಲಿಸಲಾಗಿತ್ತು.

ಇದೀಗ ರಾಜ್ಯ ಹೈಕೋರ್ಟ್  ಒಪ್ಪಿಗೆ ನೀಡಿದ್ದು, ಇಬ್ಬರನ್ನು ಒಂದು ವರ್ಷದವರೆಗೆ ನ್ಯಾಯಾಂಗ ಬಂಧನದಲ್ಲಿರಿಸುವಂತೆ ರಾಜ್ಯ ಗೃಹ ಇಲಾಖೆ ಆದೇಶಿಸಿದೆ.



Join Whatsapp