ಮಂಗಳೂರು | ಬಾಲಕಿಯ ಮೃತದೇಹ ಪತ್ತೆ ಕೇಸ್: ಓರ್ವ ಅರೆಸ್ಟ್

Prasthutha|

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಮೃತದೇಹ ಪತ್ತೆಯಾದ ಘಟನೆ ನಗರದ ಹೊರವಲಯದ ಜೋಕಟ್ಟೆಯಲ್ಲಿ ನಡೆದಿದೆ.

- Advertisement -


ಕೊಲೆಯಾದ ಬಾಲಕಿ ಮೂಲತಃ ಬೆಳಗಾವಿ ಜಿಲ್ಲೆಯ ಸದ್ಯ ಜೋಕಟ್ಟೆಯಲ್ಲಿ ವಾಸವಾಗಿರುವ ಹನುಮಂತ ಎಂಬವರ ತಮ್ಮನ ಮಗಳು ಎಂದು ತಿಳಿದು ಬಂದಿದೆ.

ಬಾಲಕಿಯ ಕೊಲೆಗೆ ಸಂಬಂಧಿಸಿ ಬೆಳಗಾವಿ ಮೂಲದವರೇ ಆಗಿರುವ ಸದ್ಯ ಜೋಕಟ್ಟೆಯಲ್ಲಿ ವಾಸವಿರುವ ಫಕೀರಪ್ಪ (50) ಎಂಬವರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯ ದೊಡ್ಡಪ್ಪ ಮತ್ತು ಫಕೀರಪ್ಪನ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಫಕೀರಪ್ಪನನ್ನು ಬಂಧನ ಮಾಡಲಾಗಿದೆ.

- Advertisement -


ಈ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಉಪಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.



Join Whatsapp