ಮಂಗಳೂರು | ಮೂವರು ಮಕ್ಕಳು, ಪತ್ನಿಯನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ !

Prasthutha|

ಮೂರು ಮಕ್ಕಳು ಸಾವು

- Advertisement -

ಮಂಗಳೂರು: ತಂದೆಯೋರ್ವ ತನ್ನ ಮೂವರು ಮಕ್ಕಳು ಹಾಗೂ ಪತ್ನಿಯನ್ನು ಬಾವಿಗೆ ತಳ್ಳಿ ತಾನು ಕೂಡ ಬಾವಿಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.

ರಶ್ಮಿತಾ (13), ಉದಯ (11), ದಕ್ಷಿತ್ (4) ಮೃತಪಟ್ಟ ಮಕ್ಕಳು ಎಂದು ತಿಳಿದು ಬಂದಿದೆ.

- Advertisement -

ಪದ್ಮನೂರು ಶೆಟ್ಟಿಗಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಕೃತ್ಯವೆಸಗಿದಾತ.
ಹಿತೇಶ್ ಮನೆ ಸಮೀಪ ತೆಂಗಿನಕಾಯಿ, ಹಲಸು ವ್ಯಾಪಾರ ಮಾಡುತ್ತಿದ್ದರೆ ಪತ್ನಿ ಲಕ್ಷೀ ಬೀಡಿ ಕಟ್ಟುತ್ತಿದ್ದರು.
ಕಳೆದ ಒಂದು ವಾರದಿಂದ ಅವರು ಅಂಗಡಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.

ಗುರುವಾರ ಬೆಳಿಗ್ಗೆ ಎಂದಿನಂತೆ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೆಲಸಕ್ಕೆ ಹೋಗಿ ಸಂಜೆ ವಾಪಸಾಗುತ್ತಿದ್ದಾಗ ಗಂಡ ಹಿತೇಶ್ ಶೆಟ್ಟಿಗಾರ್ ಬಳಿ ಮಕ್ಕಳು ಎಲ್ಲಿ ಎಂದು ವಿಚಾರಿಸಿದಾಗ, ಅವರು ಎಲ್ಲೋ ಆಟಕ್ಕೆ ಹೋಗಿರಬಹುದು ಎಂದು ಹೇಳಿದ್ದಾನೆ. ಇದರಿಂದ ಸಂಶಯಗೊಂಡ ಪತ್ನಿ ಎಲ್ಲಾ ಕಡೆ ಹುಡುಕಾಟ ನಡೆಸಿದ ಬಳಿಕ ಸಮೀಪದ ಮನೆಯ ಬಾವಿ ಕಡೆ ಹುಡುಕಾಡಿದಾಗ ಬಾವಿಯಲ್ಲಿ ಮಕ್ಕಳು ನೀರಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. ಬಾವಿಯ ಪಕ್ಕ ನಿಂತು ಸಹಾಯಕ್ಕೆ ಕೂಗುತ್ತಿದ್ದಾಗ ಪತ್ನಿಯನ್ನು ಹಿಂಬಾಲಿಸಿಕೊಂಡು ಬಂದ ಪತಿ ಹಿತೇಶ್, ಪತ್ನಿಯನ್ನೂ ಬಾವಿಗೆ ದೂಡಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸ್ಥಳೀಯರು ತಕ್ಷಣ ಕಾರ್ಯಾಚರಣೆ ನಡೆಸಿ ಹಿತೇಶ್ ಮತ್ತು ಲಕ್ಷೀ ಅವರನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ.

ಕೂಡಲೇ ಮೂಲ್ಕಿ ಪೋಲಿಸರಿಗೆ ಮಾಹಿತಿ ನೀಡಿದ್ದು, ಅಗ್ನಿ ಶಾಮಕದಳ ಸಹಾಯದಿಂದ ಮೂಲ್ಕಿ ಪೋಲೀಸರು ಮೂವರೂ ಮಕ್ಕಳನ್ನು ಮೇಲಕ್ಕೆತ್ತಿ ಚಿಂತಾಜನಕ ಸ್ಥಿತಿಯಲ್ಲಿ ಅಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮಕ್ಕಳು ಮೃತಪಟ್ಟರು ಎಂದು ತಿಳಿದುಬಂದಿದೆ.


ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ . ಕೌಟುಂಬಿಕ ಕಲಹವೇ ಕಾರಣ ಎಂದು ಶಂಕಿಸಲಾಗಿದೆ.

ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸುತ್ತಿದ್ದೇವೆ.

Join Whatsapp