ಮಂಗಳೂರು | ಮಣಿಪಾಲ್ ಸ್ಕೂಲ್‌ಗೆ ಹುಸಿ ಬಾಂಬ್ ಬೆದರಿಕೆ

Prasthutha|

ಮಂಗಳೂರು : ನಗರದ ಪ್ರತಿಷ್ಠಿತ ಮಣಿಪಾಲ್ ಸ್ಕೂಲ್‌ಗೆ ಈಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ 900ಕ್ಕೂ ಅಧಿಕ‌ ಮಕ್ಕಳನ್ನು ಸುರಕ್ಷಿತವಾಗಿದೆ ಮನೆಗೆ ಕಳುಹಿಸಲಾಗಿದೆ. ಬಳಿಕ ಅದು ಹುಸಿ ಬಾಂಬ್ ಬೆದರಿಕೆ ಎಂದು ಗೊತ್ತಾಗಿದೆ.

- Advertisement -

ಬೆಳಗ್ಗೆ ಶಾಲೆ ಆರಂಭವಾದ ಬಳಿಕ ಬಾಂಬ್ ಬೆದರಿಕೆಯ ಮೇಲ್ ಬಂದಿರುವುದು ತಿಳಿದುಬಂದ ತಕ್ಷಣವೇ ಶಾಲೆಯವರು ಪಾಂಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಂದು ಪರಿಶೀಲನೆ ನಡೆಸಿದರು. ಮುಂಜಾಗೃತ ಕ್ರಮವಾಗಿ ಶಾಲೆಯ 900ಕ್ಕೂ ಅಧಿಕ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದರು.

ಈ ಬಗ್ಗೆ ಪ್ರಸ್ತುತ ನ್ಯೂಸ್‌ಗೆ ಮಾಹಿತಿ ನೀಡಿರುವ ಮಣಿಪಾಲ ಶಾಲೆಯವರು, ಬೆಳಗ್ಗೆ 4 ಗಂಟೆಗೆ ಈಮೇಲ್ ಬಂದಿದೆ, ನಮಗೆ ಶಾಲೆ ಆರಂಭವಾದ ಬಳಿಕ ಗಮನಕ್ಕೆ ಬಂತು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದೆವು, ಮುಂಜಾಗೃತ ಕ್ರಮವನ್ನು ತೆಗೆದುಕೊಂಡು ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದೇವೆ, ಪೊಲೀಸರು ಬಂದು ಪರಿಶೀಲಿಸಿ ಹೋಗಿದ್ದಾರೆ, ಅದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪ್ರತಿಕ್ರಿಯಿಸಿದ್ದಾರೆ.



Join Whatsapp