ಮಂಗಳೂರು| ಡಿ.29ರ ವರೆಗೆ 2 ದಿನ ಸೆಕ್ಷನ್ ಮುಂದುವರಿಕೆ: ಪೊಲೀಸ್ ಆಯುಕ್ತ

Prasthutha|

ಮಂಗಳೂರು: ಜಲೀಲ್ ಹತ್ಯೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಧಿಸಲಾಗಿದ್ದ ಸೆಕ್ಷನ್ 144 ಅನ್ನು ಡಿ.29ರವರೆಗೆ 2 ದಿನಗಳ ಕಾಲ ಮುಂದುವರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

- Advertisement -


ಡಿ.25ರ ಬೆಳಗ್ಗೆ 6ರಿಂದ ಡಿ.27ರ ಬೆಳಗ್ಗೆ 6ರವರೆಗೆ ವಿಧಿಸಲಾಗಿದ್ದ ಸೆಕ್ಷನ್ 144 ಅನ್ನು ಡಿ.29ರ ಬೆಳಗ್ಗೆ 6ರವರೆಗೆ ಮುಂದುವರಿಸಲಾಗಿದೆ.
ಈ ಅವಧಿಯಲ್ಲಿ 60 ವರ್ಷ ಮೇಲ್ಪಟ್ಟ ಮಹಿಳೆಯರ ಸೇರಿದಂತೆ ಹಿರಿಯರು ಮತ್ತು 18 ವರ್ಷಕ್ಕಿಂತ ಕೆಳಗಿನ ಯುವಕರು, ಮಕ್ಕಳನ್ನು ಹೊರತುಪಡಿಸಿ ಉಳಿದವರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವ ಮತ್ತು ತುರ್ತು ಸಂದರ್ಭದಲ್ಲಿ ಸಂಚರಿಸುವವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಶಶಿಕುಮಾರ್ ತಿಳಿಸಿದ್ದಾರೆ.

Join Whatsapp