ಮಂಡ್ಯವನ್ನು ಮಂಗಳೂರು ಮಾಡಲ್ಲ; ಮಂಡ್ಯ ಮಂಡ್ಯಾನೇ: ಸಿಟಿ ರವಿ ತಿರುಗೇಟು

Prasthutha|

ಹಾಸನ: ಮಂಡ್ಯವನ್ನು ಯಾರೂ ಮಂಗಳೂರು ಮಾಡಲ್ಲ. ಮಂಡ್ಯ ಮಂಡ್ಯಾನೇ. ಮಂಡ್ಯ ಪಾಕಿಸ್ತಾನದೊಳಗೆ ಇಲ್ಲ.ಮಂಡ್ಯ ಇಂಡಿಯಾದೊಳಗೆ ಇದೆ ಎನ್ನುವುದನ್ನು ‘ಅವರು’ ನೆನಪಿಟ್ಟುಕೊಳ್ಳಲಿ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ, ಸಚಿವ ಚಲವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ಮಂಡ್ಯದಲ್ಲಿರುವ ಹನುಮ ಭಕ್ತರು ಯಾರಿಗೂ ತಲೆತಗ್ಗಿಸಲ್ಲ. ತಲೆ ಎತ್ತಿಕೊಂಡು ಓಡಾಡುವವರು. ಹನುಮನಿಗಾಗಿ ಜೀವ ಕೊಡಲು ತಯಾರಾಗಿ ಇರುವವರು. ಮಂಡ್ಯವನ್ನು ಇನ್ನೇನೋ ಮಾಡುತ್ತೇವೆ ಎಂದು ಹೊರಡಬೇಡಿ ಎಂದರು

ಯಾವ ರಾಜಕಾರಣ ನಡೆಯುತ್ತದೆ ಎಂಬುದನ್ನು ಅಂತ ಜನ ತೀರ್ಮಾನ ಮಾಡುತ್ತಾರೆ. ರಾಷ್ಟ್ರಧ್ವಜ ಎಲ್ಲಕ್ಕಿಂತ ಎತ್ತರದಲ್ಲಿರಬೇಕು. ಹನುಮ ಧ್ವಜ ತೆಗೆದು ರಾಷ್ಟ್ರ ಧ್ವಜ ಹಾರಿಸಬೇಕಿತ್ತಾ? ಇನ್ನೊಂದು ಧ್ವಜಸ್ತಂಭ ನೆಟ್ಟು, ಹನುಮ ಧ್ವಜಕ್ಕಿಂತ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಬೇಕಿತ್ತು ಎಂದು ಹೇಳಿದರು.



Join Whatsapp