ಮಂಗಳೂರು| ಆಸ್ಪತ್ರೆಯ ಶವಾಗಾರದಲ್ಲಿ ಕೊಳೆತ ಮೃತದೇಹ: 5 ಲಕ್ಷ ರೂ. ಪರಿಹಾರಕ್ಕೆ ಆದೇಶ

Prasthutha|

ಮಂಗಳೂರು : ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಕೊಳೆತದ್ದಕ್ಕೆ ಖಾಸಗಿ ಆಸ್ಪತ್ರೆ 5 ಲಕ್ಷ ರೂ. ಪರಿಹಾರ ನೀಡಲು ಆದೇಶವಾಗಿದೆ. 2019ರ ಅಕ್ಟೋಬರ್ 25ರಂದು ಮಂಗಳೂರಿನ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಮೃತರಾದ ವಿಲ್ಸನ್ ಅಲನ್ ಫೆರ್ನಾಂಡಿಸ್‌ ಎಂಬವರ ದೇಹ ಕೊಳೆತದ್ದಕ್ಕಾಗಿ ಆಸ್ಪತ್ರೆ ಈ ಪರಿಹಾರ ನೀಡಬೇಕಾಗಿದೆ. ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಶವಾಗಾರದಲ್ಲಿ ಇರಿಸುವುದಕ್ಕಾಗಿ 2,250 ರೂ. ಹಣವನ್ನು ಕೂಡ ಆಸ್ಪತ್ರೆ ಪಡೆದುಕೊಂಡಿತ್ತು.

- Advertisement -

ರೆಫ್ರಿಜಿರೇಟರ್ ಹಾಳಾಗಿದೆ, ಮೃತದೇಹವನ್ನು ತೆಗೆದುಕೊಂಡು ಹೋಗಿ ಎಂದು ಎರಡು ದಿನಗಳ ಬಳಿಕ ಆಸ್ಪತ್ರೆಯವರು ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ ಆ ಸಮಯದಲ್ಲಿಯೇ ಮೃತದೇಹ ಸಂಪೂರ್ಣವಾಗಿ ಕೊಳೆತಿತ್ತು. ಶವಾಗಾರದಲ್ಲಿದ್ದ ಮೃತದೇಹ ಸಿಬ್ಬಂದಿ ನಿರ್ಲಕ್ಷ್ಯದಿಂದ ಕೊಳೆತುಹೋಗಿತ್ತು ಎನ್ನಲಾಗಿದೆ.

ಕೊಳೆತಿದ್ದರಿಂದ ಮೃತರಿಗೆ ಅಂತಿಮ ಗೌರವ ಸಲ್ಲಿಸಲು ಸಾಧ್ಯವಾಗದೆ ಕುಟುಂಬ ಮಾನಸಿಕವಾಗಿ ನೊಂದಿತ್ತು. ಆಸ್ಪತ್ರೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮೃತರ ಸಹೋದರ ನೆಲ್ಸರ್ ದೂರು ನೀಡಿದ್ದರು. ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮೃತದೇಹ ಕೊಳೆತಿದೆ ಎಂದು ಆರೋಪಿಸಿದ್ದರು. ಆದರೆ, ದೂರಿಗೆ ಪ್ರತಿಕ್ರಿಯಿಸಿದ್ದ ಆಸ್ಪತ್ರೆ, ಆಸ್ಪತ್ರೆಯಿಂದ ಸೂಚನೆ ನೀಡಿದ ತಕ್ಷಣ ಮೃತದೇಹ ತೆಗೆದುಕೊಂಡು ಹೋಗಿದ್ದರೆ ಕೊಳೆಯುತ್ತಿರಲಿಲ್ಲ ಎಂದು ಉತ್ತರಿಸಿತ್ತು.

- Advertisement -

ಕುಟುಂಬವು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿತ್ತು. ಪ್ರಕರಣದ ವಿಚಾರಣೆ ನಡೆಸಿದ ಆಯೋಗ ಮೃತರ ಸಂಬಂಧಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆಸ್ಪತ್ರೆಗೆ ಆದೇಶಿಸಿದೆ.




Join Whatsapp