ಮಂಗಳೂರು: ನಾಳೆ ಕಾಂಗ್ರೆಸ್‌ ಸಮಾವೇಶ, ವಾಹನ ಸಂಚಾರ ಬದಲಾವಣೆ

Prasthutha|

ಮಂಗಳೂರು: ಮಂಗಳೂರಿನ ಅಡ್ಯಾರ್‌ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಾಳೆ (ಫೆ.17) ಕಾಂಗ್ರೆಸ್‌ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ.

- Advertisement -

ಉಡುಪಿ ಕಡೆಯಿಂದ ಮಂಗಳೂರು ನಗರದ ಮೂಲಕ ಬಿ.ಸಿ.ರೋಡ್ ಹಾಗೂ ಬೆಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ನಂತೂರು-ಪಂಪ್‌ವೆಲ್‌-ತೊಕ್ಕೊಟ್ಟು-ಮುಡಿಪು-ಮೆಲ್ಕಾರ್‌ ಮೂಲಕ ಸಂಚರಿಸಬೇಕಾಗಿದೆ.

ಬೆಂಗಳೂರು ಹಾಗೂ ಬಿ.ಸಿ.ರೋಡ್‌ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ಮೆಲ್ಕಾರ್‌- ಮುಡಿಪು-ತೊಕ್ಕೊಟ್ಟು-ಪಂಪ್‌ವೆಲ್‌ ಮೂಲಕ ಸಂಚರಿಸಬೇಕಾಗಿದೆ.

- Advertisement -

ಈ ಸಂಚಾರ ಮಾರ್ಪಾಡು ಫೆ.17ರಂದು ಬೆಳಗ್ಗೆ 9ರಿಂದ ಕಾರ್ಯಕ್ರಮ ಮುಗಿಯುವವರೆಗೆ ಇರುತ್ತದೆ.

ವಾಹನ ಪಾರ್ಕಿಂಗ್‌:
ಕಾರ್ಯಕ್ರಮಕ್ಕೆ ಬಂಟ್ವಾಳ ಕಡೆಯಿಂದ ಬರುವ ಗಣ್ಯರ ಕಾರುಗಳು ಹಾಗೂ ಸಾರ್ವಜನಿಕರ ದ್ವಿಚಕ್ರ ವಾಹನಗಳನ್ನು ಕಾಮತ್‌ ಮೈದಾನದಲ್ಲಿ ನಿಲ್ಲಿಸಬೇಕಾಗಿದೆ. ಬಂಟ್ವಾಳ ಕಡೆಯಿಂದ ಬರುವ ಸಾರ್ವಜನಿಕರ ಕಾರುಗಳನ್ನು ಅಡ್ಯಾರ್‌ನ ಕರ್ಮಾರ್‌ ಮೈದಾನದಲ್ಲಿ ಪಾರ್ಕಿಂಗ್‌ ಮಾಡಬೇಕಾಗಿದೆ.

ಬಂಟ್ವಾಳ ಕಡೆಯಿಂದ ಬರುವ ಬಸ್‌ಗಳು ಕಾರ್ಯಕರ್ತರನ್ನು ಕಾಮತ್‌ ಪಾರ್ಕಿಂಗ್‌ ಬಳಿ ಇಳಿಸಿ ಅಲ್ಲಿಂದ ಮುಂದುವರಿದು ಕಣ್ಣೂರಿನಲ್ಲಿ ಯೂ ಟರ್ನ್ ಮಾಡಿ ಮೋತಿಶ್ಯಾಮ್‌/ಷಾ ಮೈದಾನದಲ್ಲಿ ನಿಲುಗಡೆ ಮಾಡಬೇಕು.

ಮಂಗಳೂರು ಕಡೆಯಿಂದ ಬರುವ ಗಣ್ಯರ ಕಾರುಗಳನ್ನು ಅಡ್ಯಾರ್‌ ಗಾರ್ಡನ್‌ನಲ್ಲಿ ಪಾರ್ಕಿಂಗ್‌ ಮಾಡಬೇಕು.

ಮಂಗಳೂರು ಕಡೆಯಿಂದ ಬರುವ ಬಸ್‌ಗಳು ಕಾರ್ಯಕರ್ತರನ್ನು ಅಡ್ಯಾರ್‌ ಗಾರ್ಡನ್‌ ಮುಂಭಾಗ ಇಳಿಸಿ ಸೋಮನಾಥಕಟ್ಟೆಯಲ್ಲಿ ಯೂ ಟರ್ನ್ ಆಗಿ ಕಣ್ಣೂರು ಮಸೀದಿ ಬಳಿ ಇರುವ ಷಾ ಮೈದಾನದಲ್ಲಿ ನಿಲುಗಡೆ ಮಾಡಬೇಕು.

ಮಂಗಳೂರು ಕಡೆಯಿಂದ ಬರುವ ದ್ವಿಚಕ್ರ ವಾಹನಗಳನ್ನು ಅಡ್ಯಾರ್‌ ಗಾರ್ಡನ್‌ ಮೈದಾನದಲ್ಲಿ ಪಾರ್ಕಿಂಗ್‌ ಮಾಡಬೇಕು.

ಅಡ್ಯಾರ್‌ ಕಟ್ಟೆಯಲ್ಲಿರುವ ಜಯಶೀಲ ಅವರ ಮೈದಾನದಲ್ಲಿ ಕೂಡ ಪಾರ್ಕಿಂಗ್‌ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp