ಮನೆಯಲ್ಲಿ ಗಾಂಜಾ ಬೆಳೆದ ಮಂಗಳೂರಿನ ಕಾಲೇಜು ವಿದ್ಯಾರ್ಥಿ ಬಂಧನ

Prasthutha|

ಕಾಸರಗೋಡು: ಮನೆಯ ಟೆರೇಸ್ ನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -


ಬೇಕೂರು ಕನ್ನಡಿ ಪಾರೆಯ ನಜೀಬ್ ಮೆಹಫೂಝ್ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.


ಕಿದೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಮೆಹಫೂಝ್ ಟೆರೇಸ್ ನಲ್ಲಿ ಗಾಂಜಾ ಗಿಡ ಗಳನ್ನು ಬೆಳೆಸಿದ್ದನು. ಕುಂಬಳೆ ಪೊಲೀಸರು ಮೂರು ಗಿಡಗಳನ್ನು ಪತ್ತೆ ಹಚ್ಚಿದ್ದು, ಈತ ಸ್ವಂತ ಬಳಕೆ ಅಲ್ಲದೆ, ಮಾರಾಟಕ್ಕಾಗಿ ಗಾಂಜಾ ಗಿಡ ಗಳನ್ನು ಬೆಳೆಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.

- Advertisement -


ಮಂಗಳೂರಿನ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ಈತ ಅಲ್ಲಿಂದಲೇ ಗಾಂಜಾ ಗಿಡದ ಬೀಜಗಳನ್ನು ಸಂಗ್ರಹಿಸಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.



Join Whatsapp