ಮಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಜಾರಿ ಬಳಿಕವಂತೂ ನಗರದಲ್ಲಿಯೂ ಸರ್ಕಾರಿ ಬಸ್ ಗಳನ್ನು ಕಲ್ಪಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಇದೀಗ ನಗರವಾಸಿಗಳಿಗೆ ಕೆಎಸ್‌ಆರ್‌ಟಿಸಿ ಶುಭ ಸುದ್ದಿ ನೀಡಿದ್ದು, ಮಂಗಳೂರಿನ ಯಾವ್ಯಾವ ರೂಟ್ಗಳಲ್ಲಿ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಬಹುದು ಎಂಬ ಬಗ್ಗೆ ಸಮಕ್ಷೆ ನಡೆಸಿದೆ.
ಕೆಎಸ್ ಆರ್ ಟಿಸಿ ಮಂಗಳೂರು ವಿಭಾಗವು ನಗರದಲ್ಲಿ ತನ್ನ ಸೇವೆಗಳನ್ನು ಹೆಚ್ಚಿಸಲು ಚಿಂತನೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಹೆಚ್ಚಿನ ಬೇಡಿಕೆ ಇರುವ ಎಲ್ಲಾ ಮಾರ್ಗಗಳಿಗೆ ಬಸ್‌ಗಳನ್ನು ಒದಗಿಸಲು ನಮಗೆ ಸಾಧ್ಯವಾಗದಿದ್ದರೂ, ನಾವು ಮೂರು-ನಾಲ್ಕು ಮಾರ್ಗಗಳನ್ನು ಸಂಪರ್ಕಿಸಲು ಮತ್ತು ಒಂದು ಬಸ್ ಅನ್ನು ಒದಗಿಸಲು ಯೋಜಿಸುತ್ತಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.