ಮಂಗಳೂರು | ಮುಸ್ಲಿಮ್ ವಕೀಲೆಗೆ ಮಾನಸಿಕ ಕಿರುಕುಳ: ಬಸ್ ಚಾಲಕ, ಕಂಡೆಕ್ಟರ್ ವಿರುದ್ಧ ಪ್ರಕರಣ ದಾಖಲು

Prasthutha|

ಮಂಗಳೂರು: ಅವಾಚ್ಯ ಶಬ್ದಗಳಿಂದ ಸಾರ್ವಜನಿಕರ ಮುಂದೆ ಬಸ್ ನಿರ್ವಾಹಕ ನಿಂದಿಸಿದ್ದಾನೆ ಎಂದು ವಕೀಲೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -


ಈ ಬಗ್ಗೆ ಬಸ್ ಚಾಲಕ ಮತ್ತು ಕಂಡೆಕ್ಟರ್ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ ವೃತ್ತಿಯಲ್ಲಿ ವಕೀಲೆಯಾಗಿರುವ ಮಹಿಳೆಯೊಬ್ಬರು ಪಿವಿಎಸ್ ಸರ್ಕಲ್ ಬಳಿ ಬೋಂದೆಲ್ ನಿಂದ ಸ್ಟೆಟ್ ಬ್ಯಾಂಕ್ ಗೆ ತೆರಳು ಆಶೆಲ್ ರೂಟ್ ನಂಬರ್ 19 ಬಸ್ ನ್ನು ಹತ್ತಲು ಹೋಗಿದ್ದಾರೆ. ಈ ವೇಳೆ ಬಸ್ ಡ್ರೈವರ್ ಎಕಾಏಕಿ ಬಸ್ ನ್ನು ಚಲಾಯಿಸಿದ್ದು, ಮಹಿಳೆ ರಸ್ತೆಗೆ ಬೀಳುವ ವೇಳೆ ಬಸ್ ನ ನಿರ್ವಾಹಕ ಮಹಿಳೆಯ ಕೈಯನ್ನು ಹಿಡಿದು ಏಳೆದು ಬಸ್ ನಲ್ಲಿದ್ದ ಸಾರ್ವಜನಿಕರ ಎದುರೇ ” ನೀವು ಮುಸ್ಲಿಂ ಹೆಂಗಸರಿಗೆ ತುಂಬಾ ಅಹಂಕಾರ ಬೇಕಾದರೆ ನಮ್ಮ ಬಸ್ಸಲ್ಲಿ ಬರಬೇಕು ಇಲ್ಲದಿದ್ದರೆ ಇಳಿಯಬೇಕು ಎಂದು ” ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಕುರಿತಂತೆ ವಕೀಲೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -


ದೇರಳಕಟ್ಟೆ ಸಮೀಪದ ಜಲಾಲ್ಬಾಗ್ ನಿವಾಸಿಯಾಗಿರುವ ಕೆ.ಮುಫೀದಾ ರಹ್ಮಾನ್ ಅವರು ವೃತ್ತಿಯಲ್ಲಿ ವಕೀಲೆಯಾಗಿದ್ದು, ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Join Whatsapp