ಮಂಗಳೂರು: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಮತ್ತು ಮಣಿಪಾಲದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಎಸ್ ಆರ್ ಟಿಸಿ (ಎಸಿ ವೋಲ್ವೋ) ಬಸ್ ಗಳ ಸಂಚಾರ ಸೋಮವಾರದಿಂದ ಪ್ರಾರಂಭವಾಗಲಿದೆ.
ರೈಲು ನಿಲ್ದಾಣದಿಂದ ಜ್ಯೋತಿ, ಲಾಲ್ ಬಾಗ್, ಕುಂಟಿಕಾನ, ಕಾವೂರು ಮೂಲಕ ಬಸ್ ಹಾದುಹೋಗುತ್ತದೆ. ರೈಲ್ವೆ ನಿಲ್ದಾಣ ದಿಂದ ವಿಮಾನ ನಿಲ್ದಾಣಕ್ಕೆ 100ರೂ ಹಾಗೂ ವಿಮಾನ ನಿಲ್ದಾಣದಿಂದ ಮಣಿಪಾಲಕ್ಕೆ ಹೋಗುವ ಟಿಕೆಟ್ ಬೆಲೆ 300 ರೂ.
ಕೇಂದ್ರ ರೈಲ್ವೆ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ವೇಳಾಪಟ್ಟಿ: ಬೆಳಿಗ್ಗೆ 6.30, ಬೆಳಿಗ್ಗೆ 8.45, ಮಧ್ಯಾಹ್ನ 11.10, ಮಧ್ಯಾಹ್ನ 3.00, ಸಂಜೆ 5.15, ಸಂಜೆ 7.30.
ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ವೇಳಾಪಟ್ಟಿ: ಬೆಳಿಗ್ಗೆ 7.40, ರಾತ್ರಿ 10.00, ಮಧ್ಯಾಹ್ನ 12.20, ಮಧ್ಯಾಹ್ನ 4.05, ಸಂಜೆ 6.25, ಸಂಜೆ 8.45.
ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ: ಬೆಳಿಗ್ಗೆ 7.15, ಬೆಳಿಗ್ಗೆ 8.45 ಮತ್ತು ಸಂಜೆ 5.15.
ವಿಮಾನ ನಿಲ್ದಾಣದಿಂದ ಮಣಿಪಾಲಕ್ಕೆ: ಬೆಳಿಗ್ಗೆ 10.45, 12.30 ಮತ್ತು ರಾತ್ರಿ 9.15.