ಮಂಗಳೂರು | ಹೆದ್ದಾರಿ ಮಧ್ಯೆ ಹೊತ್ತಿ ಉರಿದ BMW ಕಾರು, ಸಂಪೂರ್ಣ ಭಸ್ಮ

Prasthutha|

ಮಂಗಳೂರು: ನಗರದ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಬಳಿ ಬಿಎಂಡಬ್ಲ್ಯೂ ಕಾರೊಂದು ಹೊತ್ತಿ ಉರಿದು ಸಂಪೂರ್ಣ ಭಸ್ಮವಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

- Advertisement -


ಶಾರ್ಟ್ ಸರ್ಕ್ಯೂಟ್ ನಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದ್ದು, ಕಾರಿನಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಚಾಲಕ ಕಾರಿನಿಂದ ಕೆಳಗಿಳಿದಿದ್ದಾರೆ ಎಂದು ತಿಳಿದು ಬಂದಿದೆ.


ದೆಹಲಿ ನೋಂದಾಯಿತ ಬಿಎಂಡಬ್ಲ್ಯೂ ಕಾರು ಅರ್ಧಗಂಟೆಯಿಂದ ಹೊತ್ತಿ ಉರಿಯುತ್ತಿದ್ದು, ಸಂಪೂರ್ಣ ಭಸ್ಮವಾಗಿದೆ.



Join Whatsapp