ಮಂಗಳೂರು – ಬೆಂಗಳೂರು ರೈಲು ಸಂಚಾರ ಮಾ. 21ರವರೆಗೆ ರದ್ದು

Prasthutha|

ಮಂಗಳೂರು: ಪಡೀಲ್ ಮತ್ತು ಕುಲಶೇಖರ ರೈಲ್ವೆ ನಿಲ್ದಾಣಗಳ ನಡುವೆ ಜೋಡಿ ರೈಲು ಮಾರ್ಗ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ ಮಾರ್ಚ್ 21 ರವರೆಗೆ ರೈಲುಗಳ ಸಂಚಾರವನ್ನು ವಲಯ ರೈಲ್ವೇ ತಾತ್ಕಾಲಿಕವಾಗಿ ರದ್ದುಗೊಳಿಸಿ ಆದೇಶ ಮಾಡಿದೆ.

- Advertisement -

ಯಶವಂತಪುರ-ಮಂಗಳೂರು ಎಕ್ಸ್‌’ಪ್ರೆಸ್ (16575/16576) ಮಾರ್ಚ್​.17 ರಿಂದ ರದ್ದುಗೊಳಿಸಲಾಗಿದೆ.

ಯವಂತಪುರ-ಮಂಗಳೂರು ಬೆಂಗಳೂರು-ಕಾರವಾರ ಎಕ್ಸ್‌ ಪ್ರೆಸ್(16595/16596), ಯಶವಂತಪುರ-ಕಣ್ಣೂರು ಎಕ್ಸ್‌ ಪ್ರೆಸ್(16511/16511), ಕೆಎಸ್ ಆರ್ ಬೆಂಗಳೂರು – ಮಂಗಳೂರು ಸೆಂಟ್ರಲ್ ಎಕ್ಸ್‌ ಪ್ರೆಸ್(16585/16586) ರೈಲುಗಳು ಸಂಚಾರ ಮಾ.19 ಮತ್ತು 20ರಂದು ರದ್ದುಗೊಳಿಸಲಾಗಿದೆ.

- Advertisement -

ಸುಬ್ರಹ್ಮಣ್ಯ ರಸ್ತೆ-ಮಂಗಳೂರು ಸೆಂಟ್ರಲ್ (ಗಾಡಿ ಸಂಖ್ಯೆ 06488/06489) ಮಧ್ಯದ ಪ್ರಯಾಣಿಕರ ವಿಶೇಷ ರೈಲು, ಮಂಗಳೂರು ಸೆಂಟ್ರಲ್ ಕಬಕ ಪುತ್ತೂರು ಪ್ರಯಾಣಿಕರ ರೈಲುಗಳು(06487/06486) ಮಾರ್ಚ್​ 17ರಿಂದ ಮಾರ್ಚ್​ 20ರವರೆಗೆ ಸಂಚರಿಸುವುದಿಲ್ಲ.

ಪುಣೆ- ಎರ್ನಾಕುಲಂ ಎಕ್ಸ್‌ ಪ್ರೆಸ್ ರೈಲು(11097/11098) ಮಾ.19ರಂದು ಮತ್ತು 21ರಂದು ರದ್ದಾಗಿದೆ.

ಯಶವಂತಪುರ- ಕಾರವಾರ ಎಕ್ಸ್‌ ಪ್ರೆಸ್ ರೈಲುಗಳ ಸಂಚಾರ(16515/16516) ಮಾ.18 ಮತ್ತು 19ರಂದು ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.



Join Whatsapp