ಮಂಗಳೂರು; ರಾಜಕಾಲುವೆಗೆ ಉರುಳಿದ ಆಟೋ: ಚಾಲಕ ಮೃತ್ಯು

Prasthutha|

ಮಂಗಳೂರು: ರಾತ್ರಿ ಸುರಿದ ಮಳೆಗೆ ರಾಜಕಾಲುವೆಗೆ ಆಟೋ ಉರುಳಿ ಚಾಲಕ ಸಾವನ್ನಪ್ಪಿದ ಘಟನೆ ಮಂಗಳೂರು ನಗರದ ಕೊಟ್ಟಾರ ಅಬ್ಬಕ್ಕ ನಗರದಲ್ಲಿ ನಡೆದಿದೆ.

- Advertisement -


ದೀಪಕ್ (40) ಮೃತ ಆಟೋ ಚಾಲಕ.


ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಕೊಟ್ಟಾರದಲ್ಲಿ ರಾಜಕಾಲುವೆ ತುಂಬಿ ಹರಿಯುತ್ತಿತ್ತು. ಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ನೀರು ರಸ್ತೆಗೆ ಬಂದಿದೆ. ರಸ್ತೆ ಹಾಗೂ ರಾಜಕಾಲುವೆಗೆ ಸಮಾನವಾಗಿ ನೀರು ಹರಿಯುತ್ತಿತ್ತು. ರಾತ್ರಿ ವೇಳೆ ಆ ರಸ್ತೆಯಲ್ಲಿ ಸಂಚರಿಸುವಾಗ ಆಟೋ ರಾಜಕಾಲುವೆಗೆ ಉರುಳಿ ಘಟನೆ ಸಂಭವಿಸಿದೆ.

Join Whatsapp