ಮಂಗಳೂರು: ಗುರುಪುರ ಬ್ಲಾಕ್ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಕಾಂಗ್ರೆಸ್ ಚುನಾವಣಾ ಉಸ್ತುವಾರಿಗಳ ನೇಮಕ

Prasthutha|

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಗುರುಪುರ ಬ್ಲಾಕ್ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಲೋಕಸಭಾ ಚುನಾವಣೆಯ ಉಸ್ತುವಾರಿಗಳನ್ನು ಕೆಪಿಸಿಸಿ ಜಿಲ್ಲಾಧ್ಯಕ್ಷ ಎಂಎಲ್‌ಸಿ ಹರೀಶ್ ಕುಮಾರ್ ನೇಮಕ ಮಾಡಿ‌ ಆದೇಶಿಸಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿರವರ ನಿರ್ದೇಶನದ ಮೇರೆಗೆ ಈ ನೇಮಕ ಮಾಡಲಾಗಿದೆ.

- Advertisement -

ನೀರು ಮಾರ್ಗ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸುರೇಂದ್ರ ಕಂಬಳಿ ಬಿ. ಎಲ್. ಪದ್ಮನಾಭ ಕೋಟ್ಯಾನ್, ಮೆಲ್ವಿನ್ ಡಿಸೋಜ, ಯೂಸುಫ್ ಉಳಾಯಿಬೆಟ್ಟು ಅವರನ್ನು ನೇಮಕ‌ ಮಾಡಲಾಗಿದೆ.

ಗುರುಪುರ ಕ್ಷೇತ್ರಕ್ಕೆ ಯು.ಪಿ. ಇಬ್ರಾಹೀಂ, ಸುನೀಲ್ ಗಂಜಿಮಠ ಮತ್ತು ಅಬ್ದುಲ್ ಅಝೀಝ್ ಬಾಷಾ ಇವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ.

- Advertisement -

ಆರ್.ಕೆ. ಪೃಥ್ವಿರಾಜ್, ಕೃಷ್ಣ ಅಮೀನ್, ಗಿರೀಶ್ ಆಳ್ವ, ಹರಿಯಪ್ಪ ಮುತ್ತೂರು ಇವರನ್ನು ಎಡಪದವು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಚುನಾವಣೆಯ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಉಸ್ತುವಾರಿಗಳು ತಮಗೆ ವಹಿಸಿರುವ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಯ ವಲಯ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳ ಸಹಕಾರ ಪಡೆದು ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಲು ಪ್ರತೀ ಬೂತ್‌ ಮಟ್ಟದಲ್ಲಿ ಸಭೆ ನಡೆಸಿ ಕಾರ್ಯಕ್ರಮಗಳನ್ನು ರೂಪಿಸಲು ಅವರಿಗೆ ಸೂಚಿಸಲಾಗಿದೆ.



Join Whatsapp