ಮಂಗಳೂರು: ಉಳ್ಳಾಲ ಹರೇಕಳ ನ್ಯೂಪಡ್ಪು ನಿವಾಸಿ ಸದ್ಯ ನಾಟೆಕಲ್ ನಲ್ಲಿ ನೆಲೆಸಿದ್ದ ನವಾಝ್ (32) ಎಂಬ ಯುವಕ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ.
ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನವಾಝ್ ಗುರುವಾರ ಜ್ವರ ತೀವ್ರವಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಾವನ್ನಪ್ಪಿದ್ದಾರೆ. ಮೃತರು ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಜಿ ಎಲ್ ಜಿ ಫಿಶರೀಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಒಂದು ವರ್ಷದ ಮಗುವಿದೆ.