ಮಂಗಳೂರು: ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತ್ಯು

Prasthutha|

- Advertisement -

ಮಂಗಳೂರು: ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ನಗರದ ಪಡೀಲ್ ಅಳಪೆ ಪಡ್ಡು ಬಳಿ ನಡೆದಿದೆ.

ಅಳಪೆ ಪಡ್ಡುರೆಂಜ ನಿವಾಸಿ ವರುಣ್ (27) ಮತ್ತು ಎಕ್ಕೂರು ಕೆಎಚ್‌ಬಿ ಕಾಲನಿ ನಿವಾಸಿ ವೀಕ್ಷಿತ್ (28) ಮೃತಪಟ್ಟ ಯುವಕರು ಎಂದು ಗುರುತಿಸಲಾಗಿದೆ.

- Advertisement -

ಇಂದು ಸಂಜೆ 5 ಗಂಟೆಯ ವೇಳೆ 6 ಮಂದಿ ಗೆಳೆಯರು ಒಟ್ಟಾಗಿ ಕ್ರಿಕೆಟ್ ಆಡಲು ತೆರಳಿದ್ದರು. ಈ ಸಂದರ್ಭ ವರುಣ್ ಮತ್ತು ವೀಕ್ಷಿತ್ ರೈಲ್ವೆಯ ಟ್ರಾಕ್ ಪಕ್ಕದ ಹಳ್ಳದ ದಡದಲ್ಲೇ ಕುಳಿತಿದ್ದರು.

ಹಳ್ಳದ ದಡದಲ್ಲಿ ಕುಳಿತಿದ್ದ ಸಂದರ್ಭ ವರುಣ್ ನೀರಿಗೆ ಬಿದ್ದಿದ್ದು, ಇದನ್ನು ನೋಡಿದ ವೀಕ್ಷಿತ್ ಕೂಡಲೇ ಹಳ್ಳಕ್ಕೆ ಅವರನ್ನು ರಕ್ಷಿಸಲು ಧುಮಿಕಿದರು. ಆದರೆ ಹಳ್ಳದಲ್ಲಿ ಹೂಳು ತುಂಬಿದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ತೀವ್ರ ಹುಡುಕಾಟದ ಬಳಿಕ ಮೃತದೇಹ ವನ್ನು ಹೊರತೆಗೆಯಲಾಗಿದೆ.

Join Whatsapp