ಮಂಗಳೂರು | ವಾಹನಗಳಲ್ಲಿ ಕಣ್ಣು ಕುಕ್ಕುವ ದೀಪ ಬಳಕೆ: 1,170 ಪ್ರಕರಣ ದಾಖಲು

Prasthutha|

ಮಂಗಳೂರು: ಕಣ್ಣು ಕುಕ್ಕುವಂತಹ ದೀಪಗಳನ್ನು ಅಳವಡಿಸಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಚಲಾಯಿಸಿರುವ ವಾಹನಗಳ ಮಾಲೀಕರ ವಿರುದ್ಧ ಪೊಲೀಸರು ಜೂನ್ 15ರಿಂದ ಇದುವರೆಗೆ ಒಟ್ಟು 1,170 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ₹ 5.86 ಲಕ್ಷ ದಂಡ ವಿಧಿಸಿದ್ದಾರೆ.

- Advertisement -


‘ಕಮಿಷನರೇಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಬೀದಿ ದೀಪಗಳನ್ನು ಹೊಂದಿರುವ ಎಲ್ಲಾ ರಸ್ತೆಗಳಲ್ಲಿ ಹೆಚ್ಚು ಪ್ರಖರ ಬೆಳಕಿನ ದೀಪ ಬಳಸಿದ ವಾಹನ ಚಾಲಕರ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಿದ್ದೇವೆ. ನಿಯಮ ಉಲ್ಲಂಘಿಸಿದ ವಾಹನ ಚಾಲಕರ ವಿರುದ್ದ ಕ್ರಮ ಕೈಗೊಂಡಿದ್ದೇವೆ. ಈ ವಿಶೇಷ ಕಾರ್ಯಾಚರಣೆಯು ಇನ್ನೂ ಮುಂದುವರೆಯಲಿದೆ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.


‘ಕಣ್ಣೂ ಕುಕ್ಕುವಂತಹ ದೀಪಗಳನ್ನು ವಾಹನಗಳಲ್ಲಿ ಅಳವಡಿಸದಂತೆ ವಾಹನಗಳ ಚಾಲಕರು ಹಾಗೂ ವಾಹನ ಮಾಲೀಕರಲ್ಲಿ ಜೂನ್ 15ರಿಂದ ಜಾಗೃತಿ ಮೂಡಿಸುತ್ತಿದ್ದೇವೆ. ವಾಹನಗಳ ದೀಪವು 1989ರ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ಗೊತ್ತುಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿರಬೇಕು. ಈ ಕಾಯ್ದೆಯಡಿ ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚು ಹೆಡ್ ಲೈಟ್ ಅಳವಡಿಸುವುದು, ಹೆಡ್ ಲೈಟ್ಗಳನ್ನು ಮಾರ್ಪಡಿಸುವುದಕ್ಕೆ, ವಾಹನದಲ್ಲಿ ಹೆಚ್ಚುವರಿಯಾಗಿ ಎಲ್.ಇ.ಡಿ ಅಳವಡಿಸುವುದಕ್ಕೆ, ಕಣ್ಣಿಗೆ ಕುಕ್ಕುವಂತಹ ಪ್ರಖರ ಬೆಳಕು ಸೂಸುವ ದೀಪಗಳನ್ನು ಅಳವಡಿಸುವುದಕ್ಕೆ ಅವಕಾಶವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.



Join Whatsapp