ಮಂಡ್ಯ: ಆಸ್ತಿ ಆಸೆಗೆ ಪತ್ನಿಯನ್ನೇ ಕೊಂದ ಶಿಕ್ಷಕ

Prasthutha|

ಮಂಡ್ಯ: ಆಸ್ತಿ ಆಸೆಗೆ ಪತಿಯೇ ಪತ್ನಿಯ ಕೊಲೆ ಮಾಡಲಾಗಿರುವ ಘಟನೆ ಮಂಡ್ಯದ ವಿವಿ ನಗರ ಬಡಾವಣೆಯಲ್ಲಿ ನಡೆದಿದೆ. ಮಂಡ್ಯದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಪಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಣದ ದಾಹಕ್ಕೆ ಬಿದ್ದು ದಿಂಬು, ಬೆಡ್ಶೀಟ್ ನಿಂದ ಉಸಿರುಗಟ್ಟಿಸಿ ಪತ್ನಿಯನ್ನೇ ಕೊಲೆ ಮಾಡಿದ್ದಾನೆ.

- Advertisement -


ಎಸ್.ಶೃತಿ(32) ಕೊಲೆಯಾದವರು, ಟಿ.ಎನ್.ಸೋಮಶೇಖರ್(41) ಬಂಧಿತ ಆರೋಪಿ.

ಹತ್ಯೆ ಮಾಡಿ ಬಳಿಕ ಸಹಜ ಸಾವೆಂದು ನಾಟಕವಾಡಿದ್ದ, ಆದ್ರೆ ಈ ನಾಟಕ ಬಯಲಾಗಿದ್ದು ಹಂತಕ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.



Join Whatsapp