ಕರ್ತವ್ಯ ಲೋಪ ಆರೋಪದಡಿ ಮಂಡ್ಯ ತಹಶೀಲ್ದಾರ್ ಅಮಾನತು: ಸಿಹಿ ಹಂಚಿ ಸಂಭ್ರಮಿಸಿದ ಗ್ರಾಮಸ್ಥರು

Prasthutha|

ಮಂಡ್ಯ: ಕರ್ತವ್ಯ ಲೋಪ ಹಾಗೂ  ದುರ್ನಡತೆ ಆರೋಪದಡಿ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ ಶಂಗಾಳಿ ಅಮಾನತುಗೊಂಡ ಹಿನ್ನೆಲೆ  ಬೂದನೂರು ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

- Advertisement -

ತಹಶೀಲ್ದಾರ್ ಅಮಾನತು ಆಗಿದ್ದಕ್ಕೆ ಮಂಡ್ಯ ಡಿಸಿ ಅಶ್ವಥಿಗೆ ಗ್ರಾಮಸ್ಥರು ಜೈಕಾರ ಕೂಗಿದ್ದಾರೆ. ಗ್ರಾಮಸ್ಥರು ಸ್ವಂತ ಮನೆಗಾಗಿ ಹಲವು ಭಾರಿ ಹೋರಾಟ ನಡೆಸಿದ್ದರು. ಈ ವೇಳೆ ನಿವೇಶನ ಹಂಚಿಕೆ ವಿಚಾರದಲ್ಲಿ ತಹಶೀಲ್ದಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನ್ಯಾಯಕ್ಕಾಗಿ ಹೋರಾಟ ನಡೆಸಿದ್ದ ಗ್ರಾಮಸ್ಥರಿಗೆ ನ್ಯಾಯ ಕೊಡಿಸುವಲ್ಲಿ ತಹಶೀಲ್ದಾರ್ ಚಂದ್ರಶೇಖರ್ ಶಂಗಾಳಿ ವಿಫಲರಾಗಿದ್ದರು. ಗ್ರಾಮಸ್ಥರು ಹಲವು ಬಾರಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಈ ಸಂಬಂಧ ಗ್ರಾಮಸ್ಥರು ತಹಶೀಲ್ದಾರ್ ವಿರುದ್ಧ ಮಂಡ್ಯ ಡಿಸಿಗೆ ದೂರು ನೀಡಿದ್ದರು. ಸದ್ಯ 13 ಕಾರಣ ನೀಡಿ ತಹಶೀಲ್ದಾರ್ ನನ್ನು ಅಮಾನತುಗೊಳಿಸಲಾಗಿದೆ.



Join Whatsapp