ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಫೋನ್ ನಂಬರ್ ಫಲಕ ಅಳವಡಿಸಲು ಆದೇಶ

Prasthutha|

ಬೆಂಗಳೂರು: ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಫೋನ್ ನಂಬರ್ ಫಲಕ ಅಳವಡಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌ ಆದೇಶ ನೀಡಿದ್ದಾರೆ. ಹೌದು ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಎಸ್​ಪಿ, ಎಎಸ್​ಪಿ, ಡಿವೈಎಸ್‌ಪಿ ಅವರ ಫೋನ್ ನಂಬರ್​ಗಳನ್ನು ಪ್ರತಿ ಪೊಲೀಸ್ ಠಾಣೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲಿ ಹಾಕಬೇಕು ಎಂದು ಆದೇಶಿಸಲಾಗಿದೆ.

- Advertisement -

ಎರಡು ದಿನದಲ್ಲಿ ಫಲಕ ಹಾಕಿ ವರದಿಯನ್ನ ಡಿಜಿ ಕಚೇರಿಗೆ ಕಳಿಸಲು ಸೂಚನೆ

ಇನ್ನು ಈ ಆದೇಶದಂತೆ ಪೊಲೀಸ್​ ಠಾಣೆಯ ಆಯ್ದ ಸ್ಥಳದಲ್ಲಿ ಫೋನ್ ನಂಬರ್‌ಗಳುಳ್ಳ ಫಲಕವನ್ನ ಅಳವಡಿಸಿ, ಎರಡು ದಿನದಲ್ಲಿ ವರದಿಯನ್ನ ಡಿಜಿ ಕಚೇರಿಗೆ ಕಳಿಸಲು ಸೂಚನೆ ನೀಡಲಾಗಿದೆ. ಇದರ ಜೊತೆಗೆ ಠಾಣೆಯಲ್ಲಿ ಯಾವುದೇ ದೂರು ಸ್ವೀಕರಿಸದಿದ್ದಲ್ಲಿ ಹಿರಿಯ ಅಧಿಕಾರಿಗಳನ್ನ ಸಂಪರ್ಕಿಸಿ ಎಂದು ಫಲಕದ ಮೇಲೆ ಬರೆಯಬೇಕು ಎನ್ನಲಾಗಿದೆ. ಇದರಿಂದ ಸಾರ್ವಜನಿಕರಿಗೆ ಪೊಲೀಸರ ಮೇಲೆ ಮತ್ತಷ್ಟು ಭರವಸೆ ಹೆಚ್ಚಿದೆ. ಒಂದು ವೇಳೆ ಜಿಲ್ಲೆಯ ಯಾವುದೇ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲು ಪೊಲೀಸರು ನಿರಾಕರಿಸಿದರೆ, ಕೂಡಲೇ ಉನ್ನತ ಪೊಲೀಸ್​ ಅಧಿಕಾರಿಗಳಿಗೆ ಕರೆ ಮಾಡುವ ಮೂಲಕ ಸಮಸ್ಯೆಯನ್ನ ಹೇಳಿಕೊಳ್ಳಬಹುದಾಗಿದೆ.

Join Whatsapp