ಮಣಪ್ಪುರಂ ಫೈನಾನ್ಸ್ ಸಂಸ್ಥೆಗೆ 20 ಲಕ್ಷ ರೂ. ದಂಡ ವಿಧಿಸಿದ RBI

Prasthutha|

ಹೊಸದಿಲ್ಲಿ: ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFC) ಪಾಲಿಸಬೇಕಾದ ಕೆಲ ನಿಯಮಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಮಣಪ್ಪುರಂ ಫೈನಾನ್ಸ್ ಸಂಸ್ಥೆಗೆ ಭಾರತೀಯ ರಿಸರ್ವ್ ಬ್ಯಾಂಕ್ 20 ಲಕ್ಷ ರೂ ದಂಡ ವಿಧಿಸಿದೆ.

- Advertisement -

ಆದರೆ, ಗ್ರಾಹಕರ ವ್ಯವಹಾರದೊಂದಿಗೆ ಕಂಪನಿ ಯಾವುದೇ ಲೋಪ ಆಗಿದೆ ಎಂದು ಅರ್ಥೈಸಿಕೊಳ್ಳಬೇಕಿಲ್ಲ. ಕೆಲ ಕಾನೂನು ಪಾಲನೆಯಲ್ಲಿ ಲೋಪವಾಗಿದ್ದಕ್ಕೆ ದಂಡ ಹಾಕಲಾಗಿದೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

ಮಣಪ್ಪುರಂ ಫೈನಾನ್ಸ್ ಕಂಪನಿಯ ಹಣಕಾಸು ಸ್ಥಿತಿಯನ್ನು ಆರ್​ಬಿಐ ಪರಿಶೀಲನೆ ನಡೆಸಿತ್ತು. ಕಂಪನಿಯ ರಿಸ್ಕ್ ಅಸೆಸ್ಮೆಂಟ್ ರಿಪೋರ್ಟ್, ಇನ್ಸ್​ಪೆಕ್ಷನ್ ರಿಪೋರ್ಟ್, ಸೂಪರ್​ವೈಸರಿ ಲೆಟರ್ ಇತ್ಯಾದಿ ದಾಖಲೆಗಳನ್ನೂ ಪರಿಶೀಲಿಸಿತ್ತು. 90 ದಿನಗಳಿಂದಲೂ ಪಾವತಿಯಾಗದೇ ಸ್ಥಗಿತಗೊಂಡಿದ್ದ ಕೆಲ ಗೋಲ್ಡ್ ಲೋನ್ ಖಾತೆಗಳನ್ನು ಎನ್​ಪಿಎ ಅಥವಾ ಅನುತ್ಪಾದಕ ಆಸ್ತಿ ಎಂದು ವರ್ಗೀಕರಿಸಲು ಕಂಪನಿ ವಿಫಲವಾಗಿದೆ. ಇದು ನಿಯಮದ ಉಲ್ಲಂಘನೆ ಎಂದು ಆರ್​ಬಿಐ ಪರಿಗಣಿಸಿದೆ.

- Advertisement -

ಹಾಗೆಯೇ, 2020-21ರ ಹಣಕಾಸು ವರ್ಷದಲ್ಲಿ ಕೆಲ ಸಾಲದ ಖಾತೆಗಳಿಗೆ ಲೋನ್–ಟು–ವ್ಯಾಲ್ಯೂ ರೇಷಿಯೋವನ್ನು ಸರಿಯಾಗಿ ಪಾಲಿಸಲಾಗಿಲ್ಲದಿರುವುದೂ ಬೆಳಕಿಗೆ ಬಂದಿದೆ. ಈ ಬಗ್ಗೆ ಮಣಪ್ಪುರಂ ಫೈನಾನ್ಸ್ ಕಂಪನಿಯಿಂದ ಆರ್​ಬಿಐ ಉತ್ತರ ಕೋರಿತ್ತು. ಇದಕ್ಕೆ ಸಮಂಜಸವಾದ ಉತ್ತರ ಬರದೇ ಇರುವುದರಿಂದ ಕಂಪನಿಗೆ 20 ಲಕ್ಷ ರೂ ದಂಡವನ್ನು ಆರ್​ಬಿಐ ವಿಧಿಸಿದೆ.



Join Whatsapp