‘ಯು ಆರ್ ಎ ಬಾಂಬರ್’ಮೊಬೈಲ್ ಮೆಸೇಜ್ ಗೆ ಬೆಲೆ ತೆತ್ತ ಯುವಕ-ಯುವತಿ: ಪ್ರಕರಣ ದಾಖಲು

Prasthutha|

ಮಂಗಳೂರು: ನಗರದ  ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ವರ್ತನೆ ತೋರಿದ ಯುವಕ ಹಾಗೂ ಯುವತಿಯನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

- Advertisement -

ಉತ್ತರ ಪ್ರದೇಶ ಮೂಲದ ಯುವಕ ದೀಪಯಾನ್ ಮಾಂಜಿ ಹಾಗೂ ಸಿಮ್ರಾನ್ ಟಾಮ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಹೊರಟಿದ್ದ ಯುವತಿ ಏರ್ ಪೋರ್ಟ್ ನಲ್ಲಿರುವಾಗಲೇ ಯುವಕನಿಗೆ ಮೆಸೇಜ್ ಮಾಡಿದ್ದು, ಈ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ಆರಂಭಿಸಿದ್ದಾರೆ.

ಇಂಡಿಗೋ ವಿಮಾನ ನಿನ್ನೆ ಬೆಳಗ್ಗೆ 11ಗಂಟೆಗೆ ಮುಂಬೈಗೆ ಹೊರಟಿದ್ದು, ವಿಮಾನದಲ್ಲಿದ್ದ ಯುವಕನಿಗೆ ‘ಯು ಆರ್ ಎ ಬಾಂಬರ್’ ಎಂದು ಯುವತಿಯೋರ್ವಳು ಮೆಸೇಜ್ ಮಾಡಿದ್ದಾಳೆ. ಈ ವೇಳೆ ಪಕ್ಕದ ಸೀಟಿನಲ್ಲಿದ್ದ ಮಹಿಳೆಯು ಮೆಸೇಜ್ ನೋಡಿ ವಿಮಾನ ಸಿಬಂದಿಗೆ ಮಾಹಿತಿ ನೀಡಿದ್ದು, ಕೂಡಲೇ ಭದ್ರತಾ ಸಿಬಂದಿ ಟೇಕಾಫ್ ಗೆ ರೆಡಿಯಾಗಿದ್ದ ವಿಮಾನ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿ ತಪಾಸಣೆ ನಡೆಸಿದ್ದಾರೆ.

- Advertisement -

ಭದ್ರತಾ ತಪಾಸಣೆ ಬಳಿಕ ಸಂಜೆ ಐದು ಗಂಟೆಗೆ ಇಂಡಿಗೋ ವಿಮಾನ ಮುಂಬೈಗೆ ತೆರಳಿದೆ.

ಘಟನೆ ಸಂಬಂಧ ಇಂಡಿಗೋ ವಿಮಾನ ಸಿಬ್ಬಂದಿಯ ದೂರಿನಂತೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp