ದಲಿತ ಯುವತಿಯನ್ನು ವಿವಾಹವಾಗಿದ್ದ ಯುವಕನ ಥಳಿಸಿ ಹತ್ಯೆ

Prasthutha: November 13, 2020

ಗುರುಗ್ರಾಮ್ : ದಲಿತ ಯುವತಿಯನ್ನು ವಿವಾಹವಾಗಿದ್ದ ಯುವಕನೊಬ್ಬನನ್ನು, ಯುವತಿಯ ಗ್ರಾಮಸ್ಥರು ಥಳಿಸಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.

ನ.9ರಂದು ಬಾದ್ ಶಾ ಪುರದಲ್ಲಿ ಯುವಕರ ತಂಡವೊಂದು ರಾಜಸ್ಥಾನದ ಅಲ್ವಾರ್ ಮೂಲದ 28ರ ಹರೆಯದ ಆಕಾಶ್ ಎಂಬಾತನ ಮೇಲೆ ದಾಳಿ ನಡೆಸಿತ್ತು. ಆಕಾಶ್ 26ರ ಹರೆಯದ ದಲಿತ ಯುವತಿಯನ್ನು ವಿವಾಹವಾಗಿದ್ದ. ವಿವಾಹದ ನಂತರ ಆಕಾಶ್ ಗೆ ಫೋನ್ ಮೂಲಕ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಆತನ ಸಹೋದರ ತಿಳಿಸಿದ್ದಾರೆ.

ಮದುವೆ ನಡೆದು ಆರು ತಿಂಗಳ ಬಳಿಕ, ಪತ್ನಿಯ ಊರಿಗೆ ಮೊದಲ ಬಾರಿ ದಂಪತಿ ತೆರಳಿತ್ತು. ಈ ವೇಳೆ ನಡೆದ ಸಣ್ಣ ಘಟನೆಯೊಂದು ವಾಗ್ವಾದಕ್ಕೆ ತೆರಳಿ, ಗುಂಪೊಂದು ಆಕಾಶ್ ಮೇಲೆ ಹಲ್ಲೆ ನಡೆಸಿತ್ತು. ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಆಕಾಶ್ ಈಗ ಕೊನೆಯುಸಿರೆಳೆದಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿ ಅಜಯ್ ಅಲಿಯಾಸ್ ಪ್ರಮಿ ಜಾತವ್, ರವಿ ಸಿಂಗ್ ಜಾತವ್, ಪವನ್ ಜಾತವ್, ಧರ್ಮೇಂದ್ರ ಜಾತವ್, ಮೋಹಿತ್ ಜಾತವ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.   

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!