ಮಥುರಾ: ವ್ಯಕ್ತಿಯೊಬ್ಬ ಕಾರಿನಲ್ಲಿ ಮಸೀದಿಗೆ ನುಗ್ಗಿದ್ದಲ್ಲದೆ ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವ ಮಾಹಿತಿ ತಿಳಿದುಬಂದಿದೆ.
ವ್ಯಕ್ತಿಯನ್ನು ಜಮುನಾಪರ್ ಮೀರಾ ವಿಹಾರ್ ಕಾಲೋನಿ ನಿವಾಸಿ ಪುಷ್ಪೇಂದ್ರ ಚೌಧರಿ ಎಂದು ಗುರುತಿಸಲಾಗಿದೆ
ಕಾರನ್ನು ಲಾಕ್ ಮಾಡಿ ಪುಷ್ಪೇಂದ್ರ ಚೌಧರಿ ಮೊದಲು ಪೆಟ್ರೋಲ್ ಸುರಿದುಕೊಂಡಿದ್ದಾನೆ, ಪೊಲೀಸರು ಗಾಜು ಒಡೆದು ಹೊರಗೆ ಕರೆದೊಯ್ದರು ಮತ್ತು ಶಾಹಿ ಈದ್ಗಾ ಮಸೀದಿಯನ್ನು ಸ್ಫೋಟಿಸಲು ಬಂದಿದ್ದೇನೆ ಎಂದು ಹೇಳಿದ್ದಾನೆ.
ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಾಹಿ ಈದ್ಗಾ ಮಸೀದಿ ಬಳಿಯ ಮಿಲನ್ ತಿರಹಾದಲ್ಲಿ ಕಾರಿನಲ್ಲಿ ಕುಳಿತಿದ್ದರು. ಆಗ ಟ್ರಾಫಿಕ್ ಪೊಲೀಸರು ಆತನನ್ನು ತಡೆದು ಚಲನ್ ನೀಡಿದ್ದರು.
ಆಗ ಕೋಪಗೊಂಡ ಆತ ಶಾಹಿ ಈದ್ಗಾ ಮಸೀದಿಗೆ ನುಗ್ಗಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಘಟನೆಯ ನಂತರ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಯಾವುದೇ ರೀತಿಯ ನಿರ್ಲಕ್ಷ್ಯ ಮನೋಭಾವನೆ ತೋರಿಲ್ಲ ಎನ್ನುವ ವರದಿಯನ್ನು ಉನ್ನತ ಅಧಿಕಾರಿಗಳಿಗೆ ನೀಡಲಾಗಿದೆ. ಶಾಹಿ ಈದ್ಗಾ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.