ಅಮೆರಿಕದಲ್ಲಿ ಹೈದರಾಬಾದ್ ಮೂಲದ ವ್ಯಕ್ತಿಯ ಇರಿದು ಹತ್ಯೆ

Prasthutha|

ಹೈದರಾಬಾದ್ : ಅಮೆರಿಕದ ಜಾರ್ಜಿಯಾದಲ್ಲಿ ಹೈದರಾಬಾದ್ ಮೂಲದ 37ರ ಹರೆಯದ ವ್ಯಕ್ತಿಯೊಬ್ಬರ ಹತ್ಯೆ ನಡೆದಿದೆ. ಮೃತ ವ್ಯಕ್ತಿಯನ್ನು ಮೊಹಮ್ಮದ್ ಆರಿಫ್ ಮೊಹಿಯುದ್ದೀನ್ ಎಂದು ಗುರುತಿಸಲಾಗಿದೆ. ತಮ್ಮ ಮನೆ ಹೊರಗೆ ಇರಿತದಿಂದ ಅವರ ಸಾವು ಸಂಭವಿಸಿದೆ.

- Advertisement -

ಮೃತರ ಅಂತ್ಯ ಸಂಸ್ಕಾರ ನಡೆಸಲು ಅಮೆರಿಕಕ್ಕೆ ತೆರಳು ಸಹಾಯ ಮಾಡುವಂತೆ ಅವರ ಕುಟುಂಬ ಸರಕಾರದ ಸಹಾಯ ಯಾಚಿಸಿದೆ.

ಮೊಹಮ್ಮದ್ ಕಳೆದ 10 ವರ್ಷಗಳಿಂದ ಜಾರ್ಜಿಯಾದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ಸ್ಟೋರ್ ನಲ್ಲಿ ಕೆಲಸಕ್ಕಿದ್ದ ಒಬ್ಬ ವ್ಯಕ್ತಿ ಸೇರಿದಂತೆ ಕೆಲವು ಮಂದಿ ದಾಳಿ ಮಾಡಿ, ಈ ಹತ್ಯೆ ನಡೆಸಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -

ಅವರ ಅಂತ್ಯ ಸಂಸ್ಕಾರ ನಡೆಸಲು ಅಮೆರಿಕಕ್ಕೆ ತೆರಳಲು ನನಗೆ ಮತ್ತು ನನ್ನ ತಂದೆಗೆ ತುರ್ತು ವೀಸಾದ ವ್ಯವಸ್ಥೆ ಮಾಡುವಂತೆ ಸರಕಾರವನ್ನು ನಾನು ವಿನಂತಿಸುತ್ತೇನೆ ಎಂದು ಮೊಹಿಯುದ್ದೀನ್ ರ ಪತ್ನಿ ಮೆಹನಾಝ್ ಫಾತಿಮಾ ಹೇಳಿದ್ದಾರೆ.   

Join Whatsapp