ಅನೈತಿಕ ಸಂಬಂಧ ಶಂಕೆ: ಪತ್ನಿಯನ್ನು ಕೊಲೆ ಮಾಡಿದ ಪತಿ

Prasthutha|

ಬೆಂಗಳೂರು: ಅನೈತಿಕ ಸಂಬಂಧದ ಅನುಮಾನದಡಿ ಪತ್ನಿಯ ಕುತ್ತಿಗೆ ಸೀಳಿ ಪತಿಯೇ ಕೊಲೆ ಮಾಡಿರುವ ಘಟನೆ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಸಿ ಪಾಳ್ಯದಲ್ಲಿ ನಡೆದಿದೆ.

- Advertisement -


ಮೃತ ಗೃಹಿಣಿಯನ್ನು ನ್ಯಾನ್ಸಿ ಪ್ಲೋರಾ(29) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಜಾನ್ ಸುಪ್ರಿತ್ ನನ್ನು ಬಂಧಿಸಲಾಗಿದೆ.


ಜಾನ್ ಸುಪ್ರಿತ್ ಕಳೆದ ಎಂಟು ವರ್ಷಗಳ ಹಿಂದೆ ನ್ಯಾನ್ಸಿ ಪ್ಲೋರಾಳನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅನೈತಿಕ ಸಂಬಂಧದ ಅನುಮಾನದಲ್ಲಿ ಮನೆಯಲ್ಲಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ನಿನ್ನೆ ರಾತ್ರಿ ಪತ್ನಿಯ ಕತ್ತು ಸೀಳಿ ಕೊಲೆಮಾಡಿದ್ದಾನೆ.

Join Whatsapp