ಒಂದೇ ದಿನ, ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ವ್ಯಕ್ತಿ!

Prasthutha|

ಬಸ್ತಾರ್ : ಛತ್ತೀಸ್ ಗಢದ ಗ್ರಾಮವೊಂದರಲ್ಲಿ ಒಂದೇ ದಿನ, ಒಂದೇ ಮಂಟಪದಲ್ಲಿ ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರನ್ನು ವಿವಾಹವಾದ ಅಪರೂಪದ ಘಟನೆ ನಡೆದಿದೆ. ಜ.3ರಂದು ಈ ವಿವಾಹ ಸಮಾರಂಭ ಬಸ್ತಾರ್ ನಲ್ಲಿ ನಡೆದಿದೆ ಎನ್ನಲಾಗಿದೆ.

- Advertisement -

ಇಬ್ಬರು ಮಹಿಳೆಯರ ಒಮ್ಮತದಿಂದಲೇ ಈ ಮದುವೆ ನಡೆದಿದೆ. ಹಸೀನಾ ಮತ್ತು ಸುಂದರಿ ಎಂಬ ಯುವತಿಯರು ಚಂದು ಮೌರ್ಯನನ್ನು ಪ್ರೀತಿಸುತ್ತಿದ್ದರು. ಬಸ್ತಾರ್ ನ ತಿಕಾರಾ ಲೊಂಗಾ ಗ್ರಾಮದಲ್ಲಿ ಒಂದೇ ಮಂಟಪದಲ್ಲಿ ಅವರು ವಿವಾಹವಾಗಲು ಒಪ್ಪಿದ್ದರು.

ಮದುವೆಯಲ್ಲಿ ಭಾಗವಹಿಸಿದ ಗ್ರಾಮಸ್ಥರೂ ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಹಸೀನಾ 19 ವರ್ಷ ಮತ್ತು ಸುಂದರಿಗೆ 21 ವರ್ಷಗಳಾಗಿವೆ. ಇಬ್ಬರೂ 12ನೇ ತರಗತಿ ಪರೀಕ್ಷೇ ತೇರ್ಗಡೆಯಾಗಿದ್ದಾರೆ. ವಿವಾಹದ ವೀಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

- Advertisement -

ಈ ರೀತಿಯ ಮದುವೆ ಹಿಂದೂ ವಿವಾಹ ಕಾಯ್ದೆ ಪ್ರಕಾರ ಅಪರಾಧವಾಗಿದ್ದು, ಮದುವೆಯಾದವರ ವಿರುದ್ಧ ಪ್ರಕರಣ ದಾಖಲಾಗಿದೆ.   

Join Whatsapp