ಲೈವ್ ಲೊಕೇಶನ್ ಕಳಿಸಿ ಮಂಗಳೂರಿನಲ್ಲಿ ನದಿಗೆ ಹಾರಿದ ಯುವಕ

Prasthutha|

ಮಂಗಳೂರು: ಮಂಡ್ಯ ಮೂಲದ ಯುವಕ ಮಂಗಳೂರು ಪೋಸ್ಟ್ ಆಫೀಸ್ ಉದ್ಯೋಗಿಯೊಬ್ಬ ಪಾವಂಜೆ ಸೇತುವೆಯಿಂದ ನದಿಗೆ ಹಾರಿ ನಾಪತ್ತೆಯಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

- Advertisement -

ಮಂಡ್ಯ ಮೂಲದ ಯುವಕ ಮಂಗಳೂರು ಪೋಸ್ಟ್ ಆಫೀಸ್ ಉದ್ಯೋಗಿ ರಾಕೇಶ್ ಗೌಡ (26) ಎಂಬಾತನು ಸೇತುವೆಯಿಂದ ಹಾರಿ ನಾಪತ್ತೆಯಾಗಿದ್ದಾನೆ.. ಈತ ಪೋಸ್ಟ್ ಆಫೀಸ್ ನಲ್ಲಿ ಕೆಲಸ‌ ಮಾಡುತ್ತಿದ್ದ ಎನ್ನಲಾಗಿದೆ.

ರಾಕೇಶ್ ನದಿಗೆ ಹಾರುವ ಮುನ್ನ ತನ್ನ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಬೈಕ್ ನಲ್ಲಿ ಬಿಟ್ಟಿದ್ದ. ಇದರ ಜೊತೆಗೆ ನದಿಗೆ ಹಾರುತ್ತಿರುವ ಕುರಿತು ಸಂಬಂಧಿಕರಿಗೆ ವಾಟ್ಸಾಪ್ನಲ್ಲಿ ಲೊಕೇಶನ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಸ್ಥಳಕ್ಕೆ ಮುಲ್ಕಿ ಮತ್ತು ಸುರತ್ಕಲ್ ವ್ಯಾಪ್ತಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ



Join Whatsapp