ವ್ಯಕ್ತಿಯ ತಲೆಗೆ ಹೊಡೆದು ಭೀಕರ ಕೊಲೆ

Prasthutha|

ಬೆಂಗಳೂರು: ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರ ತಲೆಗೆ ಬಲವಾದ ಅಯುಧದಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ದುರ್ಘಟನೆ ಬ್ಯಾಡರಹಳ್ಳಿಯ ಆಂಧ್ರಹಳ್ಳಿಯ ಬಳಿ ನಡೆದಿದೆ. ಕುಣಿಗಲ್ ಮೂಲದ ಉಮೇಶ್ (52) ಕೊಲೆಯಾದವರು. ಕೃತ್ಯದ ಸಂಬಂಧ ಉಮೇಶ್ ಪತ್ನಿ ಇನ್ನಿತರರನ್ನು ಬ್ಯಾಡರಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

- Advertisement -


ಆಂಧ್ರಹಳ್ಳಿಯಲ್ಲಿ ಉಮೇಶ್ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ವಾಸವಾಗಿದ್ದು ನಿನ್ನೆ ಮಧ್ಯರಾತ್ರಿ ಅವರ ತಲೆಗೆ ಬಲವಾದ ಅಯುಧದಿಂದ ಹಲ್ಲೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡು ಅಸ್ವಸ್ಥರಾದ ಉಮೇಶ್ ಅವರನ್ನು ಇಂದು ಬೆಳಿಗ್ಗೆ ಆಸ್ಪತ್ರೆಗೆ ಕರೆತರುವಾಗ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.




Join Whatsapp