ಸ್ನೇಹಿತರ ಕಣ್ಣೆದುರಲ್ಲೇ ನದಿಯಲ್ಲಿ ಕೊಚ್ಚಿಹೋದ ಯುವಕ

Prasthutha|

ಮಹಾರಾಷ್ಟ್ರ: ಭಾರಿ ಮಳೆಯಿಂದ ನದಿ-ಹಳ್ಳಗಳು ತುಂಬಿ ತುಳುಕುತ್ತಿದೆ. ಮೋಜು ಮಾಡಲು ನೀರಿಗಿಳಿಯದಂತೆ ಎಚ್ಚರಿಕೆಗಳನ್ನು ನೀಡಲಾಗುತ್ತಿದೆ. ಆದರೆ ಕೆಲವರಿಗೆ ಈ ಎಚ್ಚರಿಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಹಾರಾಷ್ಟ್ರದ ರತ್ನಗಿರಿ ನದಿಯಲ್ಲಿ ತುಂಬಿದ ನದಿಯಲ್ಲಿ ಈಜಲು ಹೋದ ವ್ಯಕ್ತಿಯೋರ್ವ ಸ್ನೇಹಿತರು ನೋಡುತ್ತಿದ್ದಂತೆಯೇ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದ ಘಟನೆ ನಡೆದಿದೆ.

- Advertisement -

ಸ್ನೇಹಿತರು ಆತನನ್ನು ರಕ್ಷಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಹರಿಯುತ್ತಿರುವ ನದಿಯಲ್ಲಿ ಈಜಿ ಸಾಹಸ ಮಾಡಲು ಹೋದ ವ್ಯಕ್ತಿ ಸ್ನೇಹಿತರ ಎದುರೇ ನದಿಯಲ್ಲಿ ಕೊಚ್ಚಿ ಹೋದ ವೀಡಿಯೊ ವೈರಲ್ ಆಗಿದೆ.



Join Whatsapp