ಲಾಟರಿ ಗೆದ್ದು ಪಾರ್ಟಿ ಮಾಡುತ್ತಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು

Prasthutha|

ತಿರುವನಂತಪುರಂ: ಲಾಟರಿ ಹಣ ಗೆದ್ದು ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ನಿಗೂಢವಾಗಿ ಮೃತಪಟ್ಟಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿರುವ ಪಂಗೋಡ್ ನಲ್ಲಿ ನಡೆದಿದೆ.
ಸಜೀವ್ (35) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

- Advertisement -


ಕೇರಳ ರಾಜ್ಯ ಲಾಟರಿಯಲ್ಲಿ ಸಜೀವ್ ಅವರಿಗೆ 80 ಲಕ್ಷ ರೂ. ಬಂದಿದೆ. ಇದೇ ಸಂತಸದಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮಾಡುತ್ತಿದ್ದ ವೇಳೆ ಎಲ್ಲರೂ ಮದ್ಯದ ನಶೆಯಲ್ಲಿದ್ದರು.

ಈ ವೇಳೆ ಸಂತೋಷ್ ಎಂಬ ವ್ಯಕ್ತಿ ಸಜೀವ್ ಅವರನ್ನು ತಳ್ಳಿದ್ದಾರೆ. ಪರಿಣಾಮ ಸಜೀವ್ , ರಬ್ಬರ್ ತೋಟದ ಆಳದ ಹೊಂಡಕ್ಕೆ ಬಿದ್ದಿದ್ದಾರೆ. ಆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಸೋಮವಾರ ಸಂಜೆ ಅವರು ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.



Join Whatsapp