ಹೊಟೆಲ್’ಗೆ ನುಗ್ಗಿದ್ದ ನಾಯಿ ಓಡಿಸಲು ಹೋಗಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

Prasthutha|

ಹೈದರಾಬಾದ್: ಬರ್ತ್ ಡೇ ಪಾರ್ಟಿ ಮಾಡಲು ಖಾಸಗಿ ಹೊಟೆಲ್ ಗೆ ಆಗಮಿಸಿದ್ದ ಯುವಕನೋರ್ವ ನಾಯಿಯನ್ನು ಓಡಿಸುವ ಭರದಲ್ಲಿ 3ನೇ ಅಂತಸ್ತಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

- Advertisement -


ಹೈದರಾಬಾದ್ ನ ಚಂದಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿ ಪ್ರೈಡ್ ಹೋಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ವಿಡಿಯೋ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.


ಮೃತ ವ್ಯಕ್ತಿಯನ್ನು 24 ವರ್ಷದ ಉದಯ್ ಕುಮಾರ್ ಎಂದು ಗುರುತಿಸಲಾಗಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

- Advertisement -


ಪಾರ್ಟಿ ಮಧ್ಯೆ ಹೋಟೆಲ್ ಕೊಠಡಿಯಿಂದ ಹೊರಬಂದ ಉದಯ್ ಕುಮಾರ್ ಅಲ್ಲಿದ್ದ ನಾಯಿಯನ್ನು ನೋಡಿದ್ದು, ಕೂಡಲೇ ಅದನ್ನು ಅಲ್ಲಿಂದ ಓಡಿಸಲು ಮುಂದಾಗಿದ್ದಾರೆ. ಈ ವೇಳೆ ನಾಯಿ ಓಡಿದ್ದು ಅದರ ಹಿಂದೆಯೇ ಉದಯ್ ಕುಮಾರ್ ಕೂಡ ಓಡಿದ್ದಾರೆ. ಈ ವೇಳೆ ಉದಯ್ ಕುಮಾರ್ ಹೊಟೆಲ್ ನ ಗೋಡೆಯ ತೆರೆದ ಕಿಟಕಿಗೆ ಢಿಕ್ಕಿಯಾಗಿ ಆಯ ತಪ್ಪಿ ಕಿಟಕಿ ಒಳಗಿನಿಂದ ಕೆಳಗೆ ಬಿದ್ದಿದ್ದಾರೆ.



Join Whatsapp