ತೂಕ ಇಳಿಸಿಕೊಳ್ಳುವ ಮಾತ್ರೆ ಸೇವಿಸಿ ಯುವಕ ಸಾವು

Prasthutha|

ಚೆನ್ನೈ: ತೂಕ ಇಳಿಸಿಕೊಳ್ಳುವ ಮಾತ್ರೆ ಸೇವಿಸಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ನಡೆದಿದೆ.

- Advertisement -


ಪಿ. ಸೂರ್ಯ (21) ಮೃತ ಯುವಕ.


ಸೂರ್ಯ ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ತೂಕ ಕಡಿಮೆ ಮಾಡಿಕೊಳ್ಳುವಂತೆ ಕಳೆದ ಕೆಲ ತಿಂಗಳ ಹಿಂದೆ ವೈದ್ಯರು ಸಲಹೆ ಮಾಡಿದ್ದರು. ಆದರೆ ಸ್ನೇಹಿತರ ಸಲಹೆ ಮೇಲೆ ಸೂರ್ಯ ಡಿಸೆಂಬರ್ 22ರಿಂದ ತೂಕ ಕಡಿಮೆ ಮಾಡುವ ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದರು.

- Advertisement -


ಜನವರಿ 1ರಂದು ಪ್ರಜ್ಞಾಹೀನರಾಗಿ ಬಿದ್ದಿದ್ದ ಅವರನ್ನು ಕೂಡಲೇ ಮನೆಯವರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

Join Whatsapp