ತಾಯಿ, ಮಗನಿಗೆ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

Prasthutha|

ಮಡಿಕೇರಿ : ತಾಯಿ ಮತ್ತು ಅವರ ಮಗನಿಗೆ ವ್ಯಕ್ತಿಯೋರ್ವ ಗುಂಡಿಕ್ಕಿದ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕೊಡಗಿನಲ್ಲಿ ಪೊನ್ನಂಪೇಟೆ ತಾಲೂಕಿನ ಕಿರುಗೂರು ಎಂಬಲ್ಲಿ ನಡೆದಿದೆ.
ಕಿರಗೂರು ಗ್ರಾಮದ ಮಧು (42) ಹಾಗು ಅವರ ತಾಯಿ ನಳಿನಿ (63) ಮೃತ ವ್ಯಕ್ತಿಗಳು. ಆಲೆಮಾಡ ಸೋಮಯ್ಯ ಸಾಗರ್ (52) ಎಂಬಾತ ಮಧು ಹಾಗೂ ಅವರ ತಾಯಿ ನಳಿನಿ ಮೇಲೆ ಗುಂಡಿಕ್ಕಿದ್ದಾನೆ. ಬಳಿಕ ಸಾಗರ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

- Advertisement -


ಕೊಲೆಯಾದ ಮಧು ಅವರು ಸಾಗರ್ ನ ಚಿಕ್ಕಮ್ಮನ ಮಗ ಎಂದು ತಿಳಿದುಬಂದಿದೆ.
ಗುಂಡೇಟಿನಿಂದ ತೀವ್ರ ಗಾಯಗೊಂಡಿರುವ ಅಲೆಮಾಡ ನಳಿನಿ ಅವರನ್ನು ಗೋಣಿಕೊಪ್ಪಲು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅವರು ಬಳಿಕ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಜಯರಾಂ ಹಾಗೂ ಇತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Join Whatsapp