ಬೈಕ್’ನಲ್ಲಿ 6.5 ಕೆ.ಜಿ ಚಿನ್ನ ಸಾಗಿಸುತ್ತಿದ್ದಾಗ ಸಿಕ್ಕಿ ಬಿದ್ದ ವ್ಯಕ್ತಿ

Prasthutha|

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಗರ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಎಸ್.ಜೆ. ಪಾರ್ಕ್ ಪೊಲೀಸರು ನಾಕಾಬಂಧಿ ವಾಹನ ತಪಾಸಣೆ ವೇಳೆ ಬರೋಬ್ಬರಿ 6.5 ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

- Advertisement -


ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ನಿಕುಂಜ್ ಬಾಬಿಲ್ ಎಂಬಾತನನ್ನು ಹಿಡಿದು 6.5 ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಫೆ. 22 ರಂದು ಜೆ.ಸಿ. ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ ದ್ವಿಚಕ್ರ ವಾಹನ ಹೋಂಡಾ ಆಕ್ಟೀವಾದಲ್ಲಿ ತ್ರಿಬಲ್ ರೈಡಿಂಗ್ ತೆರಳುತ್ತಿದ್ದವರ ಮೇಲೆ ಪೊಲೀಸರಿಗೆ ಅನುಮಾನ ಬಂದಿದ್ದು ವಾಹನ ನಿಲ್ಲಿಸಿದ್ದಾರೆ. ಬಳಿಕ ವಾಹನ ತಪಾಸಣೆ ನಡೆಸಿದಾಗ ಚಿನ್ನಾಭರಣ ಪತ್ತೆಯಾಗಿದೆ.


ಚಿನ್ನಾಭರಣ ಸಮೇತ ವಾಹನ ಸವಾರ ನಿಕುಂಜ್ ಬಾಬಿಲ್’ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪತ್ತೆಯಾದ ಚಿನ್ನಾಭರಣಕ್ಕೆ ದಾಖಲೆ ಕೇಳಿದಾಗ, ಸವಾರರು ತಡಬಡಾಯಿಸಿದ್ದಾರೆ. ಹವಾಲ ದಂಧೆ ಬಗ್ಗೆ ಶಂಕೆ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಚುನಾವಣೆ ಸಮೀಪ ಹಿನ್ನೆಲೆಯಲ್ಲಿ ನಗರ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.

- Advertisement -


ನಗರದಿಂದ ಹೊರಹೋಗುವ ಪ್ರಮುಖ ರಸ್ತೆಗಳು, ನಗರದ ಪ್ರಮುಖ ಬಸ್ ನಿಲ್ದಾಣಗಳ ಸಂಪರ್ಕಿಸುವ ಸ್ಥಳಗಳಲ್ಲಿ ನಾಕಾಬಂಧಿ ಹಾಕಲಾಗಿದೆ. ತಡರಾತ್ರಿ ಅಲರ್ಟ್ ಆಗಿ ಬ್ಯಾರಿಕೇಡ್ ಹಾಕಿ ಪರಿಶೀಲನೆ ನಡೆಸಲಾಗಿದೆ.



Join Whatsapp