ವಾಮಾಚಾರದ ಆಡಿಯೊ ವೈರಲ್ ವಿಚಾರ: ವ್ಯಕ್ತಿಯೊಬ್ಬನಿಗೆ ತಂಡದಿಂದ ಹಲ್ಲೆ

Prasthutha|

ಬಂಟ್ವಾಳ, ಡಿಸೆಂಬರ್.9: ವಾಮಾಚಾರ ಮಾಡಿರುವ ವಿಚಾರವಾಗಿ ಆಡಿಯೋವೊಂದು ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ವಾಮಾಚಾರ ಮಾಡಿರುವ ಆರೋಪಿಯ ತಂಡದಿಂದ ವ್ಯಕ್ತಿಯೊಬ್ಬನಿಗೆ ಚೂರಿ ಇರಿದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

- Advertisement -

ಆರೋಪಿಗಳಾದ ಎಚ್.ಇ.ಹನೀಫ್, ಮುಹಮ್ಮದ್ ಶಮೀಮ್, ಫಯಾಝ್, ಶರೀಫ್, ಹನೀಫ್, ಗಣಿ, ಝುಬೈರ್, ರಿಶಾನ್ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುವನ್ನು ಫಜೀಮ್ ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಸಮೀಪದ ಅರ್ಕಳಿಕೆ ರಸ್ತೆಯಲ್ಲಿ ಆರೋಪಿ ಎಚ್.ಇ.ಹನೀಫ್ ಎಂಬಾತ ವಾಮಾಚಾರ ಮಾಡಿರುವ ಲಿಂಬೆ ಹಣ್ಣನ್ನು ಎಸೆದಿದ್ದು, ಈ ವಿಚಾರವಾಗಿ ಆರೋಪಿಯ ಆಡಿಯೊ ಸಂಭಾಷಣೆ ವೈರಲ್ ಆಗಿತ್ತು. ಈ ಆಡಿಯೋವನ್ನು ಇರ್ಫಾನ್ ಎಂಬಾತ ವೈರಲ್ ಮಾಡಿರುವುದಾಗಿ ಆರೋಪಿಸಿದ ಎಚ್.ಇ.ಹನೀಫ್ ಹಾಗೂ ಆತನ ತಂಡ ವ್ಯಕ್ತಿಗೆ ಬೆದರಿಕೆ ಹಾಕಿ, ನಿಂದಿಸಿ, ಹಲ್ಲೆಗೆ ಮುಂದಾಗಿತ್ತು ಎನ್ನಲಾಗಿದೆ. ಈ ತಂಡವು ವಾಮಾಚಾರ ವಿಚಾರವನ್ನು ಪ್ರಶ್ನಿಸಿದ ವ್ಯಕ್ತಿಗಳಿಗೆ ಬೆದರಿಕೆ ಹಾಕುತ್ತಿರುವುದಾಗಿ ಆರೋಪಿಸಲಾಗಿದೆ.



Join Whatsapp