ಪುತ್ತೂರು | ಯುವತಿ ಜೊತೆ ದುರ್ವರ್ತನೆ ಆರೋಪ: ಯುವಕನ ಬಂಧನ

Prasthutha|

ಪುತ್ತೂರು: ತಿಂಗಳಾಡಿಯಲ್ಲಿ ಯುವತಿಯ ಜೊತೆ ದುರ್ವರ್ತನೆ ತೋರಿದ ಆರೋಪದ ಮೇಲೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತನನ್ನು ಸರ್ವೆ ಸೊರಕೆ ನಿವಾಸಿ ಬದ್ರುದ್ದೀನ್ ಎಂದು ಗುರುತಿಸಲಾಗಿದೆ.

ಯುವತಿಯು ಬುಧವಾರ ಸಂಜೆ ತಿಂಗಳಾಡಿ ಎಂಬಲ್ಲಿರುವ ನ್ಯೂ ಸೂಪರ್ ಬಜಾರ್ ಅಂಗಡಿಯಲ್ಲಿ ಸ್ವೀಟ್ ಖರೀದಿಸಿ ಅಂಗಡಿಯ ಮಾಲೀಕರಿಗೆ ಹಣವನ್ನು ನೀಡುತ್ತಿರುವಾಗ ಅಂಗಡಿಯೊಳಗೆ ಬಂದ ಆರೋಪಿಯು ಏಕಾಏಕಿ ಯುವತಿ ಸೊಂಟದ ಹಿಂಬದಿಗೆ ಕೈ ಹಾಕಿದ್ದಾನೆ. ಈ ವೇಳೆ ಯುವತಿ ಬೊಬ್ಬೆ ಹಾಕಿ ಆತನನ್ನು ತಳ್ಳಲು ಯತ್ನಿಸಿದಾಗ ಆರೋಪಿ ಅಂಗಡಿಯಿಂದ ಹೊರಗೆ ಓಡಿ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಬಳಿಕ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು‌ ಬಂದಿದೆ.



Join Whatsapp