ಕಾರು ಅಪಘಾತ: ಮಮತಾ ಬ್ಯಾನರ್ಜಿಗೆ ಗಾಯ

Prasthutha|

ದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಬರ್ಧಮಾನ್ ನಿಂದ ಕೋಲ್ಕತ್ತಾಗೆ ಹಿಂದಿರುಗುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿದೆ.

- Advertisement -

ಈ ಘಟನೆಯಲ್ಲಿ ಮಮತಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮೂಲಗಳ ಪ್ರಕಾರ ಮಳೆಯ ಕಾರಣ ಮಮತಾ ಬ್ಯಾನರ್ಜಿ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಮಂಜಿನ ನಡುವೆ ಗೋಚರತೆ ಕಡಿಮೆಯಾದ ಕಾರಣ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಮುಖ್ಯಮಂತ್ರಿ ಗಾಯಗೊಂಡರು. ಅವರನ್ನು ಕೋಲ್ಕತ್ತಾಗೆ ಕರೆತರಲಾಗುತ್ತಿದೆ ಎಂದು ತಿಳಿದು ಬಂದಿದೆ.



Join Whatsapp