ಮಲ್ಪೆ ಬಂದರಿಗೆ ಅಧಿಕಾರಿಗಳ ದಿಢೀರ್ ದಾಳಿ: ಮೀನು‌ ಆಯುವ 16 ಅಪ್ರಾಪ್ತ ಮಕ್ಕಳು ವಶಕ್ಕೆ

Prasthutha|

ಉಡುಪಿ: ಅಪ್ರಾಪ್ತ ಮಕ್ಕಳನ್ನು‌ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ದುಡಿಸಿಕೊಳ್ಳುತ್ತಿದ್ದಾರೆ ಎಂಬ ದೂರಿನ ಅನ್ವಯ , ಮಹಿಳಾ ಮತ್ತು ಮಕ್ಕಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮಲ್ಪೆ ಬಂದರಿಗೆ ದಾಳಿ ಮಾಡಿದ್ದು ಮೀನು ಆಯುವ 11 ಬಾಲಕಿಯರು, 5 ಬಾಲಕರು ಸೇರಿ ಒಟ್ಟು 16 ಮಂದಿಯನ್ನು‌ ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ ಇಲಾಖೆ ಜಂಟಿಯಾಗಿ ಮುಂಜಾನೆ 4.30 ಹೊತ್ತಿಗೆ ಕಾರ್ಯಾಚರಣೆ ನಡೆಸಿದ್ದು, ಕೊಪ್ಪಳ, ದಾವಣಗೆರೆ ಮೂಲದ 16 ಅಪ್ರಾಪ್ತ ಮಕ್ಕಳನ್ನು ವಶಕ್ಕೆ ಪಡೆದುಕೊಂಡರು.

ಕಾರ್ಮಿಕ ಇಲಾಖೆಯ ಅಧಿಕಾರಿ ಕುಮಾರ್ ಮಾತನಾಡಿ, ಈ ಹಿಂದೆಯೂ ನಾವು ಈ ರೀತಿ ಕಾರ್ಯಾಚರಣೆ ಮಾಡಿ ಹಲವು ಮಕ್ಕಳನ್ನು ವಶಕ್ಕೆ ಪಡೆದುಕೊಂಡು ಸೂಕ್ತ ಪುನರ್ವಸತಿ ಕಲ್ಪಿಸಿದ್ದೇವೆ. ದಾಳಿ ಇನ್ನೂ ಮುಂದುವರಿಯುತ್ತದೆ. ಅಪ್ರಾಪ್ತ ವಯಸ್ಕರನ್ನು ದುಡಿಸಿಕೊಳ್ಳುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Join Whatsapp