ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಇಂದು ನಡೆದಿದೆ. ಅಧ್ಯಕ್ಷರಾಗಿ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿ ಇಸ್ಮಾಯಿಲ್ ಎಂ.ಇ. ಮತ್ತು ಉಪಾಧ್ಯಕ್ಷೆಯಾಗಿ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿ ಪ್ರೇಮಾ, ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು.
ಮಲ್ಲೂರು ಗ್ರಾಮ ಪಂಚಾಯತ್ ನಲ್ಲಿ 9 ಸದಸ್ಯ ಬಲವಿದ್ದು, ಅದರಲ್ಲಿ ಬಹುಮತಕ್ಕೆ 5 ಸ್ಥಾನಗಳ ಅಗತ್ಯವಿತ್ತು. ಎಸ್ ಡಿಪಿಐ ಬೆಂಬಲಿತರು 5, ಕಾಂಗ್ರೆಸ್ ಬೆಂಬಲಿತರು 3 ಮತ್ತು ಬಿಜೆಪಿ ಬೆಂಬಲಿತರು 1 ಸ್ಥಾನಗಳಲ್ಲಿ ಗೆದ್ದಿದ್ದರು.
ಎಸ್ ಡಿಪಿಐ ಬೆಂಬಲಿತರು ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳನ್ನು ಗೆದ್ದಿದ್ದುದರಿಂದ, ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ತಮ್ಮ ಬೆಂಬಲಿಗರೇ ಆಯ್ಕೆಯಾಗಲು ಅನುಕೂಲವಾಯಿತು. ಬಹುಮತ ಎಸ್ ಡಿಪಿಐ ಬೆಂಬಲಿತರ ಪರವಾಗಿದ್ದುದರಿಂದ, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತರು ತಮ್ಮ ಅಭ್ಯರ್ಥಿಗಳನ್ನು ಅಧ್ಯಕ್ಷ, ಉಪಾಧ್ಯಕ್ಷೆ ಸ್ಥಾನಕ್ಕೆ ಕಣಕ್ಕಿಳಿಸಿಲ್ಲ.